Recent Posts

Monday, January 20, 2025
ಸುದ್ದಿ

ಮಂಗಳೂರಿನಲ್ಲಿ ಡುಪ್ಲಿಕೇಟ್ ಮಂಗಳಮುಖಿಯರು: ಸಾಮಾಜಿಕ ಕಾರ್ಯಕರ್ತ ಸೌರಾಜ್ ಮೂಲಕ ಬಯಲು – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನಲ್ಲಿ ಡುಪ್ಲಿಕೇಟ್ ಮಂಗಳಮುಖಿಯರು ಸಾರ್ವಜನಿಕರನ್ನು ಲೂಟಿ ಮಾಡುತ್ತಿರುವುದು ಬಯಲಾಗಿದೆ. ಮಂಗಳಮುಖಿಯರು ಬಂದಾಕ್ಷಣ ಅವರಿಗೆ ಸಾರ್ವಜನಿಕರು ಹಣ ಕೊಡುವುದು ಸಾಮಾನ್ಯ. ಇದರ ಲಾಭವನ್ನು ಪಡೆದು ಕೆಲವು ಹೊರರಾಜ್ಯದ ಯುವಕರು ಮಂಗಳಮುಖಿಯರ ವೇಷ ಹಾಕಿ ಸಾರ್ವಜನಿಕರಿಗೆ ಕೀಟಲೆ ಕೊಡುತ್ತಿದ್ದಾರೆ.

ಕದ್ರಿ ಪಾರ್ಕಿನಲ್ಲಿ ಪ್ರೇಮಿಗಳಿಗೆ, ಸಾರ್ವಜನಿಕರಿಗೆ ಹಣಕ್ಕಾಗಿ ಕೀಟಲೆ ನೀಡುವ ಮಂಗಳಮುಖಿಯರು ಡುಪ್ಲಿಕೇಟ್ ಮಂಗಳಮುಖಿಯರು ಎಂದು ಸಾಮಾಜಿಕ ಕಾರ್ಯಕರ್ತ ಸೌರಾಜ್ ಮಂಗಳೂರು ಬಯಲು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫೇಸ್‍ಬುಕ್‍ನಲ್ಲಿ ಲೈವ್ ಮಾಡುತ್ತ ಕದ್ರಿ ಪಾಕ್‍ನಲ್ಲಿ ಮಂಗಳಮುಖಿಯರನ್ನು ಬೆನ್ನತ್ತಿದ್ದ ಸೌರಾಜ್ ಹೊರರಾಜ್ಯದ ಯುವಕರು ಟೋಪನ್ ಧರಿಸಿ ಮತ್ತು ಮಂಗಳಮುಖಿಯರ ವೇಷ ಧರಿಸಿ ಸಾರ್ವಜನಿಕರನ್ನು ಲೂಟಿ ಮಾಡುವುದನ್ನು ಬಯಲು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು