Saturday, January 25, 2025
ಸುದ್ದಿ

ತಾಯಿಯ ಎದೆಹಾಲು ಗಂಟಲಲ್ಲಿ ಉಳಿದು ಮೂರು ತಿಂಗಳ ಮಗು ಸಾವು..! – ಕಹಳೆ‌ ನ್ಯೂಸ್

ಕೇರಳ : ತಾಯಿಯ ಎದೆಹಾಲು ಗಂಟಲಿನಲ್ಲಿ ಉಳಿದುಕೊಂಡ ಪರಿಣಾಮ ಮೂರು ತಿಂಗಳ ಮಗು ಮೃತಪಟ್ಟ ಘಟನೆ ಕೇರಳದ ತಿರುವನಂತಪುರದ ಪಲ್ಲಿಚಾಲ್‍ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎದೆಹಾಲು ಕುಡಿಸಿ ತಾಯಿ ಜಾನಿಮೋಳ್ ಮಗುವನ್ನು ಮಲಗಿಸಿದ್ದರು. ಆದರೆ ಬೆಳಗ್ಗೆಯಾದರೂ ಮಗು ಏನೂ ಶಬ್ದ ಮಾಡದೇ ಇರುವುದನ್ನು ಕಂಡು ಗಾಬರಿಯಾದ ದಂಪತಿಗಳು ಕೂಡಲೇ ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿನ ಪಲ್ಸ್ ರೇಟ್ ಬಹಳ ಕಡಿಮೆ ಇದ್ದುದರಿಂದ ಎಸ್‍ಐಟಿ ಆಸ್ಪತ್ರೆಗೆ ಮಗುವನ್ನು ಶಿಫ್ಟ್ ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ಗಂಟಲು, ಮತ್ತು ಶ್ವಾಸಕೋಶದಲ್ಲಿ ತಾಯಿ ಎದೆಹಾಲು ಇದ್ದು, ಈ ಕಾರಣದಿಂದ ಮಗು ಸಾವನ್ನಪಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು