Friday, January 24, 2025
ಸುದ್ದಿ

ಗ್ರಾಮ ವಿಕಾಸ ಪ್ರತಿಷ್ಠಾನ (ರಿ.) ಬಳ್ಪ ಇದರ 77ನೇ ಸ್ವಾತಂತ್ರ‍್ಯ ದಿನಾಚರಣೆ ಸಂಭ್ರಮ – ಕಹಳೆ ನ್ಯೂಸ್

ಗ್ರಾಮ ವಿಕಾಸ ಪ್ರತಿಷ್ಠಾನ (ರಿ.) ಬಳ್ಪ,ಕೇನ್ಯ ವತಿಯಿಂದ 77ನೇ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮವು ಬಳ್ಪದ ವಿಕಾಸಪುರ ಎಡೋಣಿಯಲ್ಲಿರುವ ಶಿಶು ಮಂದಿರದಲ್ಲಿ ನಡೆಯಿತು.


ವಿಶ್ರಾಂತ ಮಾಜಿ ಸೈನಿಕರಾದ ಕುಸುಮಾಧರ ಕುಂಬ್ರ ಇವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ನಡೆದ ಸಮಾರಂಭದಲ್ಲಿ ಮಾತಾಡಿದ ಕುಸುಮಾಧರ ಅವರು ಸ್ವಾತಂತ್ರ‍್ಯ ದಿನಾಚರಣೆಯು ಮಹತ್ವ ಮತ್ತು ಮುಂದಿನ ಪೀಳಿಗೆ ಅನುಸರಿಸಬೇಕಾದ ಕಾರ್ಯಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊoಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮಪಂಚಾಯತ್ ಪ್ರಥಮ ಪ್ರಜೆ,ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸೂಂತಾರು ಮಾತಾಡಿ ಸ್ವಾತಂತ್ರ‍್ಯ ನಂತರದ 7 ದಶಕಗಳ ನಂತರವೂ ದೇಶದಲ್ಲಿ ಮಹಿಳಾ ಪೂರ್ಣ ಸ್ವರಾಜ್ಯ ಸಂಪೂರ್ಣ ವಾಗಿ ಸಾಕಾರಗೊಳ್ಳದಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು.
ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆ ಮಾತಾಡಿ ಶಿಶು ಮಂದಿರ, ಬಾಲಗೋಕುಲ ದಂತ ಸಮಾಜ ನಿರ್ಮಾಣ ಸಂಸ್ಥೆಗಳು ವ್ಯಕ್ತಿ ಗಳಲ್ಲಿ ಸಂಸ್ಕಾರ, ಸಂಸ್ಕೃತಿ ಮೂಡಿವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಪ್ರತಿಷ್ಠಾನದ ಸಮಾಜಮುಖಿ ಧ್ಯೇಯಗಳಲ್ಲಿ ಒಂದಾದ ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಬಳಕೆ ಮುಕ್ತ ಗೊಳಿಸಲು ಬಟ್ಟೆ ಚೀಲ ಬಿಡುಗಡೆ ಕಾರ್ಯಕ್ರಮ ನಡೆಯಿತು.ಬಳ್ಪ ಪಂಚಾಯತ್‌ನ ಎಲ್ಲಾ ಸದಸ್ಯರು, ಕಾರ್ಯದರ್ಶಿ ಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳ್ಪ ಪೇಟೆಯ ಎಲ್ಲಾ ವರ್ತಕರ ಬಳಿ ತೆರಳಿ ಸಾಂಕೇತಿಕವಾಗಿ ತಲಾ 10ಬಟ್ಟೆ ಚೀಲ ಉಚಿತವಾಗಿ ನೀಡಿ ಪ್ಲಾಸ್ಟಿಕ್ ದಿಂದಾಗುವ ಹಾನಿ ಬಗ್ಗೆ ವಿವರಿಸಿ ಬಟ್ಟೆ ಚೀಲಗಳನ್ನೇ ಉಪಯೋಗಿಸಲು ಗ್ರಾಹಕರಿಗೆ ತಮನವರಿಕೆಮಾಡುವಂತೆ ಮಾಹಿತಿ ನೀಡಲಾಯಿತು.ಸಿಹಿತಿನಿಸು ವಿತರಣೆಯ ಬಳಿಕ ಕಾರ್ಯಕ್ರಮ ಸಮಾರೋಪ ಗೊಂಡಿತು.