Friday, September 20, 2024
ಸುದ್ದಿ

ತಲಪಾಡಿ ಟೋಲ್‍ಗೇಟ್‍ನಲ್ಲಿ ಮಹಿಳೆಗೆ ಗಾಯ: ಟೋಲ್ ನೀಡಿಲ್ಲ ಎಂಬ ಆರೋಪಕ್ಕೆ ಹಲ್ಲೆ – ಕಹಳೆ ನ್ಯೂಸ್

ಮಂಗಳೂರು: ಬಿಸಿರೋಡಿನ ತಲಪಾಡಿ ಟೋಲ್ ಗೇಟ್ ನಲ್ಲಿ ವಾಹನದಲ್ಲಿ ಪ್ರಯಾಣಿಸುವ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಹಿನ್ನಲೆಯಲ್ಲಿ ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ನಡೆದಿದೆ.

ವಳಚ್ಚಿಲ್ ನಿವಾಸಿ ತಾಝಿಯಾ ಗಾಯಗೊಂಡ ಮಹಿಳೆ. ತಾಝಿಯಾ ಅವರ ಗಂಡ ಸದಾಖತ್ ಅವರು ಸಜೀಪ ಮನೆಯಿಂದ ವಳಚ್ಚಿಲ್ ಕಡೆಗೆ ಪ್ರಯಾಣಿಸುವ ವೇಳೆ ತಲಪಾಡಿ ಟೋಲ್ ಗೇಟ್ ನಲ್ಲಿ ಟೋಲ್ ನೀಡದೆ ಮುಂದೆ ಹೋದರು ಎಂಬ ಕಾರಣಕ್ಕಾಗಿ ಟೋಲ್ ಸಿಬ್ಬಂದಿ ಇವರು ಪ್ರಯಾಣಿಸುತ್ತಿದ್ದ ಟಾಟಾ ಇಂಡಿಕಾ ಕಾರಿನ ಮುಂಬಾಗದ ಗ್ಲಾಸಿಗೆ ಗುದ್ದಿದ ಪರಿಣಾಮ ಕಾಡಿನ ಗ್ಲಾಸು ಹೊಡೆದು ಕಾರಿನಲ್ಲಿ ಕುಳಿತು ಕೊಂಡಿದ್ದ ತಾಝಿಯಾ ಅವರ ಕಣ್ಣಿಗೆ ಗಾಜು ತಾಗಿ ಗಾಯಗಳಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಗಾಯಗೊಂಡ ಇವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಟೋಲ್ ಗೇಟ್ ಎನ್ನುವುದು ಕೇವಲ ಹಣ ವಸೂಲಿ ಮಾಡುವ ಕೇಂದ್ರ. ಟೋಲ್ ಗೇಟ್ ಯಾವ ರೀತಿಯಲ್ಲಿ ಇರಬೇಕು ಎಂಬ ನಿಯಮ ಇಲ್ಲಿ ಗೆ ಅನ್ವಯಿಸಿದಂತಿಲ್ಲ . ಇಲ್ಲಿ ಯಾವುದು ಇಲ್ಲ. ರಸ್ತೆ ರಿಪೇರಿ ಮಾಡಿಲ್ಲ, ಸರ್ವೀಸ್ ರಸ್ತೆ ದುರಸ್ತಿ ಮಾಡಿಲ್ಲ. ಬಸ್ ನಿಲ್ದಾಣ ಇಲ್ಲ. ನಾಲ್ಕು ಲೇನ್ ಇಲ್ಲ. ಒಟ್ಟಾರೆ ಹೇಳುವುದಾದರೆ ಇಲ್ಲಿ ಮೂಲಭೂತ ವಾದ ಸೌಕರ್ಯ ಗಳು ಯಾವುದು ಇಲ್ಲ ಅನ್ನುವುದೇ ಪ್ರಮುಖ ವಿಚಾರ.

ಪರಿಪೂರ್ಣ ವಾದ ಟೋಲ್ ಗೇಟ್ ಅಲ್ಲವಾದರೂ ಟೋಲ್ ಗೇಟ್ ನಲ್ಲಿ ನಿತ್ಯ ಮಾರಾಮಾರಿ ನಿಂತಿಲ್ಲ ಅನ್ನುವುದೇ ಬೇಸರದ ವಿಚಾರ. ಕಳೆದ ವಾರ ಕೂಡಾ ಇದೇ ರೀತಿ ವಾಹನ ಚಾಲಕನೋರ್ವನಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು ಅತನ ಮೇಲೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೂ ಇವರ ಮೇಲೆ ಪೋಲೀಸರು ಕ್ರಮಕೈಕೊಂಡಿಲ್ಲ ಎನ್ನುವ ದೂರುಗಳು ಕೇಳಿಬರುತ್ತಿದೆ.

ಟೋಲ್ ಗೇಟ್ ನಲ್ಲಿ ಜಾತೀವಾದ ಮಾಡುತ್ತಾರೆ ಎಂಬ ಆರೋಪವನ್ನು ಅಬ್ಬಾಸ್ ಮಾಡಿದ್ದಾರೆ. ಮಹಿಳೆಯರು ಪ್ರಯಾಣಿಸುವ ಸಂದರ್ಭದಲ್ಲಿ ಅನೇಕ ಬಾರಿ ಇಂತಹ ಘಟನೆಗಳು ನಡೆದಿವೆ. ಇಂತಹ ಪ್ರಕರಣ ಗಳು ಪುನಾರವರ್ತನೆ ಆಗಬಾರದು ಅವರ ವಿರುದ್ದ ಕಠಿಣ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.