ಬಂಟ್ವಾಳ : ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ 77ನೇ ಸ್ವಾತಂತ್ರ ದಿನಾಚರಣೆ ನಡೆಯಿತು.
ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಜಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥರಾದ ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಅವರು ಮಾತನಾಡಿ, ಕೃಷಿಕರು, ಶಿಕ್ಷಕರು, ಸೈನಿಕರು ದೇಶದ ಬೆನ್ನೆಲುಬು, ಇವರ ಸೇವಾ ಕಾರ್ಯ ದೇಶಸೇವೆಗೆ ಜೀವನ ಮುಡಿಪಾಗಿಟ್ಟಿದ್ದು ಅವರ ಸೇವಾ ಕಾರ್ಯ ಭಾರತದ ಭವಿಷ್ಯದ ರೂವಾರಿ. ಇಂದು ಭಾರತೀಯರಿಗೆ ಜಗತ್ತಿನೆಲ್ಲೆಡೆ ಭಾರತೀಯರಿಗೆ ಮೊದಲ ಪ್ರಾಶಸ್ತ್ಯ ಸಿಗುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ಬಳಿಕ ಮಾತನಾಡಿದ ಕೆ.ಎಂ.ಎಫ್. ವಿಸ್ತರಣಾಧಿಕಾರಿ ಶ್ರೀಯುತ ಜಗದೀಶ್ ನಿರಂತರ ಹೋರಾಟದ ತ್ಯಾಗದ ಫಲದ ಪರಿಣಾಮ ಇಂದು ನಾವು ಸ್ವಾತಂತ್ರ್ಯದ ಅನುಭವ ಪಡೆಯುತ್ತಿದ್ದೇವೆ , ಇಂದು ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿರುವ ದೇಶದಿಂದ ಅಭಿವೃದ್ಧಿ ಹೊಂದಿದ ದೇಶ ಎನ್ನಲು ತುಂಬಾ ಸಂತೋಷವಾಗುತ್ತದೆ. ಇಂದು ಪ್ರತಿ ಕ್ಷೇತ್ರದಲ್ಲೂ ಭಾರತವು ಮುಂಚೂಣಿಯಲ್ಲಿ ಇದ್ದು ವಿಶ್ವದಲ್ಲೇ ಮಾನ್ಯತೆ ಪಡೆದಿರುವುದು ಅತೀವ ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಮೊದಲು ಧ್ವಜರೋಹಣ ಮಾಡಿ, ವೀರಕಂಭ ಪಂಚಾಯತ್ ತನಕ ಮಕ್ಕಳು ವಿವಿಧ ಸ್ವಾತಂತ್ರ ಹೋರಾಟಗಾರ ವೇಷ ಹಾಕಿ ಪ್ರಭಾತವೇರಿ ಮಾಡಲಾಯಿತು.
ಮಕ್ಕಳು ಕನ್ನಡ, ಇಂಗ್ಲಿಷ್, ಹಿಂಧಿ ಭಾಷೆಯಲ್ಲಿ ಸ್ವಾತಂತ್ರದ ಬಗ್ಗೆ ಭಾಷಣ ಹಾಗೂ ದೇಶಪ್ರೇಮ ಗೀತೆ, ಹಾಗೂ ನೃತ್ಯ ಮಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾತಿನ ಅಧ್ಯಕ್ಷರಾದ ಶ್ರೀಮತಿ ಲಲಿತಾ, ನಿಕಟ ಪೂರ್ವ ಅಧ್ಯಕ್ಷರಾದ ದಿನೇಶ್, ಸದಸ್ಯರಾದ ಜಯಂತಿ, ಹಿರಿಯರಾದ ತಿಮ್ಮಪ್ಪ ಪೂಜಾರಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ, ಮೊದಲದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಊರಿನ ವಿವಿಧ ಸಂಘಟನೆಗಳಾದ ಮಾತೃಶ್ರೀ ಗೆಳೆಯರ ಬಳಗ, ಯುವಶಕ್ತಿ ಫ್ರೆಂಡ್ಸ್, ಕೇಸರಿ ಫ್ರೆಂಡ್ಸ್, ಯುವ ಫ್ರೆಂಡ್ಸ್ ನ ಅಧ್ಯಕ್ಷರು ಹಾಗೂ ಸದಸ್ಯರುಗಳು, ಶಾಲಾಭಿರುದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು ಭಾಗವಹಿಸಿದರು.
ಮುಖ್ಯ ಶಿಕ್ಷಕಿ ಶ್ರೀಮತಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ. ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿದರು.ಶಿಕ್ಷಕಿ ಅನುಷಾ ಕಾರ್ಯಕ್ರಮ ನೀರೂಪಿಸಿದರು. ಶಾಲಾ ಶಿಕ್ಷಕಿಯರು ಸಹಕರಿಸಿದರು.