Monday, November 25, 2024
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ – ಕಹಳೆ ನ್ಯೂಸ್

ಪುತ್ತೂರು  : ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ  ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ 77ನೇ ಸ್ವಾತಂತ್ರ‍್ಯ ದಿನವನ್ನು ಅತ್ಯಂತ ಸಂಭ್ರಮದಿoದ ಆಚರಿಸಲಾಯಿತು.


ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ| ಅಶೋಕ್ ರಯಾನ್ ಕ್ರಾಸ್ತಾರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕು. ಭಾರತವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಅನೇಕ  ನಾಯಕರು ಮಾಡಿದ ತ್ಯಾಗವನ್ನು ನಾವು ಸ್ಮರಿಸಬೇಕಾಗಿದೆ ಮತ್ತು ವಿದ್ಯಾವಂತರಾದ ನಾವು ದೇಶಕ್ಕೆ ಏನಾದರೂ ಒಳ್ಳೆಯದನ್ನು ನೀಡಬೇಕಾಗಿದೆ ಎಂದು ಹೇಳಿದರು. ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ನಾವು ನಮ್ಮ ದೇಶವನ್ನು ಪ್ರೀತಿಸಬೇಕು. ಯುವಜನತೆ
ಬಲಿಷ್ಠರಾಗಿದ್ದಲ್ಲಿ ದೇಶ ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು. ಕಾಲೇಜಿನ ಉಪಪ್ರಾಂಶುಪಾಲರೂ ಐಕ್ಯೂಎಸಿ ಸಂಯೋಜಕರೂ ಆದ ಡಾ| ಎ ಪಿ ರಾಧಾಕೃಷ್ಣ “ಭಾರತೀಯರನ್ನು ದಾಸ್ಯವಿಮುಕ್ತರನ್ನಾಗಿಸುವಲ್ಲಿ ಹಲವು ಮಹನೀಯರ ತ್ಯಾಗ ಹಾಗೂ ಬಲಿದಾನವಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರನ್ನು ನೆನಪಿಸಿಕೊಳ್ಳಬೇಕು.ಇಂದು ಭಾರತವು ಎಲ್ಲಾಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರಬೇಕೆoದಾದಲ್ಲಿ ಪೂರ್ವಜರ ಕೊಡುಗೆ ಮಹತ್ತರವಾದುದು. ಸ್ವಾತಂತ್ರ‍್ಯ ಹೋರಾಟಗಾರರನ್ನು ಹಾಗೂ ಗಡಿಕಾಯುವ ವೀರ ಯೋಧರನ್ನು ಅತ್ಯಂತ ಗೌರವ ಹಾಗೂ ಕೃತಜ್ಞತೆಯಿಂದ ಸ್ಮರಿಸಿಕೊಂಡಲ್ಲಿ ಸ್ವಾತಂತ್ರ‍್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್ ಸಿ ಸಿ ಕೆಡೆಟ್‌ಗಳು, ರೋವರ್ಸ್-ರೇಂಜರ್ಸ್, ಎನ್ ಎಸ್ ಎಸ್ ಸ್ವಯಂಸೇವಕರು, ರೆಡ್‌ಕ್ರಾಸ್ ಘಟಕ ಮತ್ತು ಬ್ಯಾಂಡ್ ಟ್ರೂಪ್ ಸ್ವಾತಂತ್ರ‍್ಯೋತ್ಸವದಲ್ಲಿ ಭಾಗವಹಿಸಿದ್ದರು. ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಲಲಿತಕಲಾ ಸಂಘಗಳ ವಿದ್ಯಾರ್ಥಿಗಳು ದೇಶಭಕ್ತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಎನ್ ಸಿ ಸಿ ಅಧಿಕಾರಿ ಲೆಫ್ಟಿನೆಂಟ್ ಜಾನ್ಸನ್ ಡೇವಿಡ್ ಸಿಕ್ವೇರಾ, ನೇವಿ ಅಧಿಕಾರಿ ತೇಜಸ್ವಿ ಭಟ್, ಎನ್ ಎಸ್ ಎಸ್ ಅಧಿಕಾರಗಳಾದ ವಾಸುದೇವ ಎನ್ ಮತ್ತು ಪುಷ್ಪ ಎನ್, ರೇಂಜರ್ಸ್ ಮತ್ತು ರೇಂಜರ್ಸ್ ಘಟಕದ ಸಂಚಾಲಕರಾದ ಶರತ್ ಆಳ್ವ, ಪೂರ್ಣಿಮಾ ಡಿ.ಎಸ್. ಹಾಗೂ ಚಂದ್ರಾಕ್ಷ, ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಜ್ಯೋತಿ ಎಂ ಮತ್ತು ರಾಜೇಶ್ ಮೂಲ್ಯ, ಲಲಿತಕಲಾ ಸಂಘದ ಸಂಚಾಲಕರಾದ ಅಶ್ವಿನಿ ಕೆ ಮುಂತಾದವರು ಕಾರ್ಯಕ್ರಮವನ್ನು  ಸಂಯೋಜಿಸಿದರು. ಬಿಬಿಎ ವಿಭಾಗದ ಪ್ರಾಧ್ಯಾಪಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರೋಹಿತ್ ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು