Thursday, January 23, 2025
ಸುದ್ದಿ

ನವಜೋಡಿಯ ಲಿಪ್‌ಕಿಸ್ ರೀಲ್ಸ್  ನೆಟ್ಟಿಗರು ಗರಂ : ಆಗಿರೋ ಎಡವಟ್ಟೇನು ಗೊತ್ತಾ..!? – ಕಹಳೆ ನ್ಯೂಸ್

ಮದುವೆ ಸಂಭ್ರಮದಲ್ಲಿ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ ಫೋಟೋ ಶೂಟ್‌ಗಳು ಈಗ ಮಾಮೂಲಾಗಿ ಹೋಗಿದೆ. ತಮ್ಮ ಮದುವೆಯ ಸುಮಧುರ ಕ್ಷಣವನ್ನ ಅವಿಸ್ಮರಣೀಯಗೊಳಿಸೋದಿಕ್ಕಾಗಿ ಡಿಫರೆಂಟ್ ಆಗಿ ರೀಲ್ಸ್ ಮಾಡಿದ ಜೋಡಿಯೊಂದು ಇದೀಗ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಧು ಮತ್ತು ವರ ಇಬ್ಬರು ಸಾಂಪ್ರದಾಯಿಕ ಉಡುಗೆಯನ್ನ ತೊಟ್ಟು, ಫೋಟೋಗೆ ಫೋಸ್ ನೀಡಿದ್ದಾರೆ. ಅದ್ರಲ್ಲೇನು ಇಲ್ಲ. ಆದ್ರೆ ಇವರು ಮಾಡಿದ ರೀಲ್ಸ್ ಎಡವಟ್ಟಿಗೆ ಕಾರಣವಾಗಿದೆ. ವರ ಧೂಮಪಾನ ಮಾಡಿ ವಧುವಿನ ಬಾಯಿಗೆ ಕೀಸ್ ಕೊಡುವ ಮೂಲಕ ಹೊಗೆಯನ್ನು ವಧುವಿನ ಬಾಯಿಯ ಒಳಗೆ ಬಿಡುತ್ತಾನೆ. ಆ ಹೊಗೆಯನ್ನು ಎಳೆದುಕೊಳ್ಳುವ ವಧು ಮತ್ತೆ ಹೊಗೆಯನ್ನು ಬಾಯಿಯಿಂದ ಹೊರಗೆ ಬಿಡುತ್ತಾಳೆ. ಬಳಿಕ ಇಬ್ಬರು ಕ್ಯಾಮೆರಾ ನೋಡುತ್ತಾ ನಗುತ್ತಾ ಪೋಸ್ ನೀಡಿದ್ದಾರೆ. ಇದೆ ನೋಡಿ ಸಮಸ್ಯೆಯಾಗಿದ್ದು.

ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿರೋದಿಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ. ನವಜೋಡಿಗಳು ಈ ರೀತಿ ಫೋಟೋಶೂಟ್ ಮಾಡುವ ಮೂಲಕ ಧೂಮಪಾನಕ್ಕೆ ಪ್ರಚೋದನೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಮೂಲ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ. ಆದರೆ, ವಿಡಿಯೋ ಮಾತ್ರ ನೆಟ್ಟಿಗರ ಗಮನ ಸೆಳೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಬಾರದು ಎಂದು ನವಜೋಡಿಯನ್ನು ನೆಟ್ಟಿಗರ ತರಾಟೆಗೆ ತೆಗೆದುಕೊಂಡಿದ್ದಾರೆ.