Thursday, January 23, 2025
ಸುದ್ದಿ

ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ; 77ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿ 77ನೇ ಸ್ವಾತಂತ್ರ‍್ಯೋತ್ಸವನ್ನು ನಿಟಿಲಾಪುರ ದೇವಸ್ಥಾನದಿಂದ ಭಾರತ ಮಾತೆಯ ಮೆರವಣಿಗೆಯನ್ನು ಸ್ವಾತಂತ್ರ‍್ಯ ಹೋರಾಟಗಾರರ ವೇಷದೊಂದಿಗೆ ಬ್ಯಾಂಡ್ ಸೆಟ್ ನೊಂದಿಗೆ ಘೋಷಣೆ ಕೂಗುತ್ತಾ ಸಾಗಿ ನಂತರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ್ ಧ್ವಜಾರೋಹಣ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಒನಕೆ ಓಬವ್ವ ಕಿರು ಪ್ರಹಸನ ನಡೆಯುತು. ಹಿರಿಯ ಹಿರಿಯ ವಿದ್ಯಾರ್ಥಿ ಮನೋಜ್ ಸ್ವಾತಂತ್ರ‍್ಯೋತ್ಸವದ ಬಗ್ಗೆ ಭಾಷಣ ಮಾಡಿದರು.ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಾಸಿಕ ಪತ್ರಿಕೆ ನಿಟಿಲಾಕ್ಷರ ವನ್ನು ಬಿಡುಗಡೆ ಮಾಡಲಾಯಿತು. ಮಕ್ಕಳಿಗೆ ಗುರುತಿನ ಚೀಟಿ, ಹೊಸ ಶಾಲಾ ಸಮವಸ್ತ್ರ, ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಬಟ್ಯಪ್ಪ ಶೆಟ್ಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಾದ ಅನಿಲ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸವಿತ, ಯೋಗ ಶಿಕ್ಷಕಿ ಶ್ರೀಮತಿ ಸರಸ್ವತಿ , ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಲತಾ ಹಾಗು ಶಿವಶಕ್ತಿ ಸಂಘ (ರಿ) ಇದರ ಅಧ್ಯಕ್ಷರಾದ ನಿತಿನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಹಿರಿಯ ವಿದ್ಯಾರ್ಥಿ ಯೋಧ ಸಂತೋಷ್,ಮಕ್ಕಳ ಪೋಷಕರು,ಹಿರಿಯ ವಿದ್ಯಾರ್ಥಿಗಳು, ಊರವರು, ಅಂಗನವಾಡಿ ಮಕ್ಕಳು,ಶಿಕ್ಷಕ ವೃಂದ ಭಾಗವಹಿಸಿದ್ದರು.