Wednesday, January 22, 2025
ಸುದ್ದಿ

ಜಾದವ್‍ಪುರ ವಿಶ್ವವಿದ್ಯಾನಿಲಯದಲ್ಲಿ ರ‍್ಯಾಗಿಂಗ್ 6 ಮಂದಿ ಬಂಧನ – ಕಹಳೆ ನ್ಯೂಸ್

ಕೊಲ್ಕತ್ತಾ : ಕೋಲ್ಕತ್ತಾದ ಜಾದವ್‍ಪುರ ವಿಶ್ವವಿದ್ಯಾನಿಲಯದ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಆರು ಮಂದಿ ಹಾಲಿ ಮತ್ತು ಮಾಜಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ರ‍್ಯಾಗಿಂಗ್ ಗೆ ಕಾಲೇಜಿನ ಹೊಸ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವುದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ನಂತರ ಇದುವರೆಗೂ 9 ಮಂದಿಯನ್ನು ಬಂಧಿಸಲಾಗಿದೆ.ನಿನ್ನೆ ಬಂಧಿತ ಆರು ವಿದ್ಯಾರ್ಥಿಗಳಲ್ಲಿ ಮೂವರು ಮಾಜಿ ವಿದ್ಯಾರ್ಥಿಗಳಾಗಿದ್ದು, ಉಳಿದ ಮೂವರು ಪ್ರಸ್ತುತ ಅಲ್ಲಿ ಓದುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪೆÇಲೀಸರಿಗೆ ಯಾವ ಹೇಳಿಕೆಗಳನ್ನು ನೀಡಬೇಕೆಂದು ಇತರ ವಿದ್ಯಾರ್ಥಿಗಳಿಗೆ ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆಯ ನಂತರ ಅವರು ಕ್ಯಾಂಪಸ್ ತೊರೆದಿದ್ದರು ಆದರೆ ಘಟನೆಯ ಸಮಯದಲ್ಲಿ ಅಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು