Wednesday, January 22, 2025
ಸುದ್ದಿ

ಬೈಕ್‌ಗಳ ಡಿಕ್ಕಿ ಉಪನ್ಯಾಸಕ, ಶಿಕ್ಷಕಿ ಸಾವು – ಕಹಳೆ ನ್ಯೂಸ್

ಬೆಂಗಳೂರು:ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಉಪನ್ಯಾಸಕ ಹಾಗೂ ಶಿಕ್ಷಕಿ ಸೇರಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡಿರುವ ದಾರುಣ ಘಟನೆ ಕೆಂಗೇರಿಯ ಮಾರುತಿನಗರ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಂಗೇರಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ರಾಮಸಮುದ್ರದ ನರಸಪ್ಪ (51) ಕಿಡ್ಸ್ ಕೇರ್ ನ ಶಿಕ್ಷಕಿ ಉಲ್ಲಾಳದ ರಕ್ಷಾ (21) ಮೃತಪಟ್ಟವರು.ಗಾಯಗೊಂಡಿರುವ ಚಂದನ್ ವಿಜಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಶ್ಚಿಮ ವಿಭಾಗದ( ಸಂಚಾರ) ಡಿಸಿಪಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ.

ಕೆಂಗೇರಿಯ ಮಾರುತಿನಗರ ಮುಖ್ಯರಸ್ತೆಯಲ್ಲಿ ಕೆಎಲ್‌ಇ ಕಾಲೇಜು ಕಡೆ ರಾತ್ರಿ 11.40ರ ವೇಳೆ ಪಲ್ಸರ್ ಬೈಕ್‌ನಲ್ಲಿ ಚಂದನ್ ಅವರು ರಕ್ಷಾರನ್ನು ಪಲ್ಸರ್ ಬೈಕ್‌ನಲ್ಲಿ ಹಿಂದೆ ಕೂರಿಸಿಕೊಂಡು ಹೋಗುವಾಗ ಕ್ರಾಸ್ ರಸ್ತೆಯಿಂದ ಎದುರಿನಿಂದ ಮತ್ತೊಂದು ಪಲ್ಸರ್ ಬೈಕ್‌ನಲ್ಲಿ ಬಂದ ನರಸಪ್ಪ ಅವರು ಡಿಕ್ಕಿ ಹೊಡೆದಿದ್ದಾರೆ.ಡಿಕ್ಕಿಯ ರಭಸಕ್ಕೆ ನರಸಪ್ಪ ಸ್ಥಳದಲ್ಲಿ ಸಾವನ್ನ್ನಪ್ಪಿದ್ದು,ಗಾಯಗೊಂಡ ರಕ್ಷಾ ಹಾಗೂ ಚಂದನ್ ನನ್ನು ಸ್ಥಳೀಯ ವಿಜಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಕ್ಷಾ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಎರಡು ಬೈಕ್‌ಗಳು ಜಖಂಗೊoಡಿದ್ದು ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ .