Wednesday, January 22, 2025
ಸುದ್ದಿ

ಆ.18ಹಾಗೂ ಆ.19ರಂದು ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ಹೋಮಿಯೋಪಥಿ ಸಮ್ಮೇಳನ

ಮೂಡಬಿದಿರೆ: ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ಪ್ರೋಟಿನಿಯೊ ಆನಿ ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನವನ್ನು ಆ. 18 ಮತ್ತು 19ರಂದು ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಹೋಮಿಯೋಪಥಿ ಬಗೆಗಿನ ಜ್ಞಾನಾರ್ಜನೆಯು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದ್ದು, ಈ ಸಮ್ಮೇಳನದಲ್ಲಿ ರಾಜ್ಯಗಳಿಂದ (ಪ್ರಮುಖವಾಗಿ ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಆಂಧ್ರಪ್ರದೇಶ) ಹೋಮಿಯೋಪಥಿ ವಿದ್ಯಾರ್ಥಿಗಳು ಹಾಗೂ ವೈದ್ಯರು ಸಾವಿರ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮ್ಮೇಳನದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಮುಲ್ಲೈ ಮುಹಿಲನ್, ದಕ್ಷಿಣ ಕನ್ನಡ ಉಪ ಆಯುಕ್ತರು, ಗೌರವಾನ್ವಿತ ಅತಿಥಿಗಳಾಗಿ ರವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ನಿರ್ದೇಶಕರು ಫಾದರ್ ಮುಲ್ಲರ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮೊಹಮ್ಮದ್ ಫರ್ಹಾದ್, ಪ್ರೊ ಚಾನ್ಸಲರ್, ಯೆನೆಪೋಯಾ ವಿಶ್ವವಿದ್ಯಾನಿಲಯ, ಡಾ.ಮಹಮ್ಮದ್ ಇಕ್ಬಾಲ್ ಕೆ. ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಅಧಿಕಾರಿ ಹಾಗೂ ಸಭಾಧ್ಯಕ್ಷರಾಗಿ ಡಾ. ಎಂ. ಮೋಹನ್ ಆಳ್ವರವರು ನೆರವೇರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮ್ಮೇಳನದಲ್ಲಿ ಡಾ.ವಿಜಯ ಕೃಷ್ಣ ವಿ, ಪ್ರಾಧ್ಯಾಪಕರು, ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಬೆಂಗಳೂರು, ಇವರು ಮಾನವನ ಅನೇಕ ರೋಗಗಳ ಸವಾಲುಗಳನ್ನು ಹಾಗೂ ಇದರ ಹೋಮಿಯೋಪಥಿ ಚಿಕಿತ್ಸಾ ವಿಧಾನಗಳ ಬಗ್ಗೆ ಮಾತನಾಡಲಿದ್ದಾರೆ.

ಡಾ. ರವಿ ಡಾಕ್ಟರ್, ಪ್ರಾಧ್ಯಾಪಕರು, ವಿರರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು, ಇವರು ಅಂಕೋಲಜಿಯಲ್ಲಿ ಹೋಮಿಯೋಪಥಿ ನಿರ್ವಹಣೆ – ಸಾಕ್ಷ್ಯ ಆಧಾರಿತ ಅಭ್ಯಾಸ ಇದರ ಕುರಿತು ಮಾತನಾಡಲಿದ್ದು, ಪಶುವೈದ್ಯರಾದ ಡಾ.ಪಿ ಮನೋಹರ್ ಉಪಾಧ್ಯರವರು ಸಾಕು ಪ್ರಾಣಿಗಳಿಗೆ ಹೋಮಿಯೋಪಥಿ ಚಿಕಿತ್ಸೆಯ ಉಪಯೋಗದ ಕುರಿತು ಪ್ರಸ್ತಾಪಿಸಲಿದ್ದಾರೆ.

ಒಟ್ಟು 30 ವೈದ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿಗಳು ಮಾಡಿರುವ ಸಂಶೋಧನೆಗಳನ್ನು ಪ್ರಸ್ತುತ ಪಡಿಸಲು ಈ ಸಮ್ಮೇಳನವು ಸದಾವಕಾಶವನ್ನು ನೀಡಿ ಹೋಮಿಯೋಪಥಿ ವೈದ್ಯ ಪದ್ಧತಿಯಲ್ಲಿನ ಸಂಶೋಧನೆಯ ಮಹತ್ವವನ್ನು ತೋರ್ಪಡಿಸುತ್ತದೆ. ಸಮ್ಮೇಳನವು ಕೇವಲ ಶೈಕ್ಷಣಿಕ ವಿಷಯಕ್ಕೆ ಮಾತ್ರ ಸೀಮಿತವಾಗದೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಒಳಗೊಂಡಿರುತ್ತದೆ.

ದೇಶದ ನಾನಾ ಭಾಗಗಳಿಂದ ಆಗಮಿಸಿರುವ ವೈದ್ಯರುಗಳಿಗೆ ತಮ್ಮ ವಿಚಾರಧಾರೆಗಳನ್ನು ಹಾಗೂ ವೈದ್ಯಕೀಯ ಅನುಭವಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ವೇದಿಕೆ ಸುವರ್ಣ ಅವಕಾಶವನ್ನು ಕಲ್ಪಿಸುತ್ತಿದೆ.