Tuesday, January 21, 2025
ಸುದ್ದಿ

ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಕುಮಾರಿ ಆಪ್ತ ಚಂದ್ರಮತಿ ಮುಳಿಯ ಇವರಿಂದ ಮಾತೃದೇವೋಭವ ಎಂಬ ಕಥಾ ಭಾಗದ ಹರಿಕಥಾ ಕಾಲಕ್ಷೇಪ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಕಲಾರತ್ನ ಶಂ ನಾ ಅಡಿಗ ಕುಂಬ್ಳೆ ಇವರ ಶಿಷ್ಯೆ ಕುಮಾರಿ ಆಪ್ತ ಚಂದ್ರಮತಿ ಮುಳಿಯ ಇವರಿಂದ ಮಾತೃದೇವೋಭವ ಎಂಬ ಕಥಾ ಭಾಗದ ಹರಿಕಥಾ ಕಾಲ ಕ್ಷೇಪ ನಡೆಯಿತು.

ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷರಾದ ಡಾಕ್ಟರ್ ಅಶೋಕ್ ಪ್ರಭು ಅವರು ಕಲಾವಿದೆಗೆ ಶಾಲು ಹೊದಿಸಿ ಸನ್ಮಾನಿಸಿ, ಹರಸಿ ಶುಭನುಡಿಗಳನ್ನು ಆಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹರಿಕಥಾ ಕಲಾವಿದೆಯ ಪರಿಚಯವನ್ನು ಶ್ರೀಮತಿ ವಿದ್ಯಾಚಂದ್ರಕಾಂತ ಭಟ್ ನಡೆಸಿಕೊಟ್ಟರು. ಆರಂಭದಲ್ಲಿ ಶ್ರೀಮತಿ ಸುಲತಾ ವರದರಾಜ ನಾಯಕ್ ಅವರು ಹರಿಕಥಾ ಕಲಾವಿದೆಗೆ ಮಲ್ಲಿಗೆ ಹಾರ ತೊಡಿಸಿ ಚಾಲನೆ ನೀಡಿದರು.

ತಬಲಾದಲ್ಲಿ ಶ್ರೀಯುತ ವಿಶ್ವನಾಥ ನಾಯಕ್ ಹಾಗೂ ಹಾರ್ಮೋನಿಯಂ ನಲ್ಲಿ ಶ್ರೀ ಪಾಂಡುರಂಗ ನಾಯಕರವರು ಸಾಥ್ ನೀಡಿ ಸಹಕರಿಸಿದರು.