Recent Posts

Tuesday, January 21, 2025
ಸುದ್ದಿ

ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಸರ್ವಿಸ್ ರಸ್ತೆಯನ್ನು ಡಾಮರೀಕರಣಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಮತ್ತು ವಾಹನ ಚಾಲಕ ಮಾಲಕರ ಸಭೆ – ಕಹಳೆ ನ್ಯೂಸ್

ಕಲ್ಲಡ್ಕ : ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಲ್ಲಡ್ಕದಲ್ಲಿ ಹಾದು ಹೋಗುತ್ತಿದ್ದು ಪ್ಲೈವ್ ಓವರ್ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕಲ್ಲಡ್ಕ ಪೇಟೆಯ ಪರಿಸರದಲ್ಲಿ ಕಾಮಗಾರಿಯ ಅವೈಜ್ಞಾನಿಕವಾಗಿದ್ದು ಸರಿಯಾದ ಸರ್ವಿಸ್ ರಸ್ತೆಗಳು ಇಲ್ಲದೆ ಸುತ್ತಮುತ್ತಲಿನ ಪ್ರದೇಶ ದೂಳುಮಯವಾಗಿ ಹಾಗೂ ಕೆಸರುಮಯವಾಗಿ ಇಲ್ಲಿಯ ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ಹಾಗೂ ಶಾಲಾ ಮಕ್ಕಳಿಗೆ ವಿಪರೀತ ತೊಂದರೆಯಾಗುತ್ತಿದ್ದು ಇದನ್ನು ತುರ್ತಾಗಿ ಸರಿಪಡಿಸಿ, ಸರ್ವಿಸ್ ರಸ್ತೆಯನ್ನು ಡಾಮರೀಕರಣಗೊಳಿಸಿ ತಕ್ಷಣ ಸಾರ್ವಜನಿಕರಿಗೆ ಸಹಕರಿಸಬೇಕೆಂದು ಜಿಲ್ಲಾಡಳಿತಕ್ಕೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಎಚ್ಚರಿಕೆ ನೀಡಲು ಕಲ್ಲಡ್ಕದ ಪಂಚವಟಿ ವಾಣಿಜ್ಯ ಸಂಕೀರ್ಣ ಸಭಾಂಗಣದಲ್ಲಿ ವರ್ತಕರು, ಸಾರ್ವಜನಿಕರು ಮತ್ತು ವಾಹನ ಚಾಲಕ ಮಾಲಕರು ಸೇರಿ ಸಭೆ ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಲಡ್ಕ ಪೇಟೆಯು ಸರ್ವಾಂಗೀಣ ಅಭಿವೃದ್ಧಿಯಲ್ಲಿ ಬೆಳೆಯುತ್ತಿದ್ದು ಈ ಪರಿಸರದಲ್ಲಿ ಶ್ರೀರಾಮ ವಿದ್ಯಾಕೇಂದ್ರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಮ ಭಜನಾ ಮಂದಿರ, ಕಲ್ಲಡ್ಕ ಜಮ್ಮಾ ಮಸೀದಿ, ಆಸ್ಪತ್ರೆ ಹಾಗೂ ಇನ್ನಿತರ ಪ್ರತಿಷ್ಟಿತಾ ಕೇಂದ್ರಗಳಿದ್ದು ಮತ್ತು ಸುಮಾರು 15 ಗ್ರಾಮಗಳ ಸಂಪರ್ಕವಿರುವ ಕೇಂದ್ರೀಕೃತ ಪಟ್ಟಣವಾಗಿದೆ. ನಿರಂತರ ಸಾವಿರಾರು ಜನರು ಓಡಾಡುತ್ತಿದ್ದು ಇಲ್ಲಿ ಸರಿಯಾದ ರಸ್ತೆ ಹಾಗೂ ವೇಗ ನಿಯಂತ್ರಣಗಳ ಅಳವಡಿಕೆ, 2 ಕಡೆಯಲ್ಲಿ ಬಸ್ ನಿಲ್ದಾಣ, ಶಾಲಾ ಮಕ್ಕಳಿಗೆ ರಸ್ತೆ ದಾಟಲು ಅನುಕೂಲಕರ ವ್ಯವಸ್ತೆ ಮತ್ತು ಸರಿಯಾದ ಚರಂಡಿ ವ್ಯವಸ್ಥೆಗಳನ್ನು ಮಾಡಿಕೊಡಬೇಕಾಗಿ ಮಾನ್ಯ ಸಂಸದರಿಗೆ, ಮಾನ್ಯ ಶಾಸಕರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಭೆಯಲ್ಲಿ ಮಾಜಿ ಶಾಸಕರಾದ ಶ್ರೀ ಎ. ರುಕ್ಮಯ್ಯ ಪೂಜಾರಿ ಹಾಗೂ ಶ್ರೀ ಪದ್ಮನಾಭ ಕೊಟ್ಟಾರಿ, ಕರ್ನಾಟಕ ಸರಕಾರ ನೀರು ಮತ್ತು ಒಳಚರಂಡಿ ಮಂಡಳಿಯ ಮಾಜಿ ನಿರ್ದೇಶಕರು ಶ್ರೀಮತಿ ಸುಲೋಚನಾ ಜಿ.ಕೆ. ಭಟ್, ಕೇಂದ್ರ ಸರಕಾರ ದಿಶಾ ಸಮಿತಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ, ಸುಲೈಮಾನ್ ಕಲ್ಲಡ್ಕ, ಅಹಮ್ಮಬ್ಬ ಕಲ್ಲಡ್ಕ, ಜಕಾರಿಯ ಕಲ್ಲಡ್ಕ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಿ.ಕೆ. ಅಣ್ಣು ಪೂಜಾರಿ, ಶ್ರೀಮತಿ ಪ್ರೇಮ, ನಾಗೇಶ್ ಕಲ್ಲಡ್ಕ, ರಾಜೇಂದ್ರ ಎನ್. ಹೊಳ್ಳ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ಹಮೀದ್ ಕಲ್ಲಡ್ಕ, ಯಾಸಿರ್ ಕೆ.ಎಸ್. ಕಲ್ಲಡ್ಕ, ಮೋಹನ್ ಕಲ್ಲಡ್ಕ, ಇಕ್ಬಾಲ್ ಕಲ್ಲಡ್ಕ ಉಪಸ್ಥಿತರಿದ್ದರು. ವಸಂತ ಪೂಜಾರಿ ಅಮ್ಟೂರು ಸ್ವಾಗತಿಸಿ, ವಿಜಯ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಯತಿನ್ ಕುಮಾರ್ ಏಳ್ತಿಮಾರ್ ವಂದಿಸಿದರು.