
ಕಾಸರಗೋಡು : ಯಕ್ಷ ಮಿತ್ರರು ಮುಳ್ಳೇರಿಯ ವತಿಯಿಂದ ಇಂದು ಸಂಜೆ ಐದು ಘಂಟೆಯಿಂದ ಮುಳ್ಳೇರಿಯಾ ಶಾಲಾ ವಠಾರದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ಆಶೀರ್ವಾದಗಳೊಂದಿಗೆ ಜಿಲ್ಲೆಯ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಚಿತ್ರಾಕ್ಷಿ ಕಲ್ಯಾಣ ಮತ್ತು ಚೂಡಾಮಣಿ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದಲ್ಲಿ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಹಾಗೂ ಗಿರೀಶ್ ರೈ ಕಕ್ಕೆಪದವು ಭಾಗವಹಿಸಲಿದ್ದಾರೆ .
ವಿಶೇಷ ಪಾತ್ರದಲ್ಲಿ ಮಹಿಳಾಯಕ್ಷರಂಗದ ಮೇರು ಕಲಾವಿದೆ ದಿಶಾ ಶೆಟ್ಟಿ ಕಟ್ಲ ಭಾಗವಹಿಸಲಿದ್ದಾರೆ.