Tuesday, January 21, 2025
ಕ್ರೈಮ್ಸುದ್ದಿಸುಳ್ಯ

ಅನ್ಯಕೋಮಿನ ವ್ಯಕ್ತಿಗೆ ಹಲ್ಲೆ ಪ್ರಕರಣ: ಸುಳ್ಯದ ಹಿಂದೂ ಯುವಕ ಜೈಲಿನಿಂದ ಬಿಡುಗಡೆ, ಯುವಕನಿಗೆ ಜಾಮೀನು ಕೊಡಿಸಿದ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ಮತ್ತು ತಂಡ -ಕಹಳೆ ನ್ಯೂಸ್ 

ಸುಳ್ಯ : ಯುವತಿಯೊಬ್ಬಳ ಜೊತೆ ತಿರುಗಾಡಿದ್ದ ಅನ್ಯಕೋಮಿನ ವ್ಯಕ್ತಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತನಾಗಿದ್ದ ಯುವಕನನ್ನು ಸುಳ್ಯದ ಬಿಜೆಪಿ ಮುಖಂಡ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಜಾಮೀನು ಕೊಡಿಸಿ ಬಿಡುಗಡೆಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುನೀತ್ ಸೋಣಂಗೇರಿ ಎಂಬ ಹಿಂದೂ ಯುವಕನನ್ನುಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸರು ಬಂಧಿಸಿದ್ದರು. ಇದೀಗ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಸುಳ್ಯದ ವಕೀಲರೊಬ್ಬರ ಸಹಾಯದೊಂದಿಗೆ ಯುವಕನನ್ನು ಬಿಡುಗಡೆಗೊಳಿಸಲಾಗಿದೆ. ಮಂಗಳೂರಿನ ಜಿಲ್ಲಾ ಕಾರಾಗೃಹದಿಂದ ಬುಧವಾರ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಬಿಡುಗಡೆ ವೇಳೆ ಬಿಜೆಪಿ ಮುಖಂಡರಾದ ಎ.ವಿ ತೀರ್ಥ ರಾಮ, ಸುಬೋದ್ ಶೆಟ್ಟಿ ಮೇನಾಲ, ವಿನಯ್ ಕುಮಾರ್ ಕಂದಡ್ಕ , ನಿಖೇಶ್ ಉಬರಡ್ಕ, ಸುನೀಲ್ ಕೇರ್ಪಳ, ಕೌಶಲ್, ರಕ್ಷಿತ್ , ಕೀರ್ತನ್, ದೀಕ್ಷಿತ್ ಹಾಜರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು