Recent Posts

Sunday, January 19, 2025
ಕ್ರೀಡೆಸುದ್ದಿ

ವಿ.ಆರ್. ಯುನೈಟೆಡ್ ಮಂಗಳೂರು ಸಂಸ್ಥೆ ವತಿಯಿಂದ ಅ. 18ರಿಂದ 20ರವರೆಗೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಫುಡ್ ಫೆಸ್ಟಿವಲ್ – ಕಹಳೆ ನ್ಯೂಸ್

ಮಂಗಳೂರು : ವಿ.ಆರ್. ಯುನೈಟೆಡ್ ಮಂಗಳೂರು ಸಂಸ್ಥೆ ವತಿಯಿಂದ ಅ. 18ರಿಂದ 20ರ ವರೆಗೆ ಮಧ್ಯಾಹ್ನ 2ರಿಂದ ರಾತ್ರಿ 10ರವರೆಗೆ ನಗರದ ಲಾಲ್ ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ಆಹಾರ ಉತ್ಸವ ಏರ್ಪಡಿಸಲಾಗಿದೆ.

ಪ್ರೊಕಬಡ್ಡಿ ಆಟಗಾರರನ್ನೊಳಗೊಂಡoತೆ ಒಟ್ಟು 8 ತಂಡಗಳು ಈ ಕಬಡ್ಡಿ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿ ಆರ್ ಯುನೈಟೆಡ್ ಸಂಸ್ಥೆ ಕೋಶಾಕಾರಿ ಸುದೇಶ್ ಭಂಡಾರಿ ಇರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆ. 18ರಂದು ಆಹಾರ ಉತ್ಸವವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿ ಸುವರು. 19ರಂದು ಕಬಡ್ಡಿ ಪಂದ್ಯಾಟ ಉದ್ಘಾಟನೆಗೊಳ್ಳಲಿದೆ. 20ರಂದು ಕಬಡ್ಡಿ ಫೈನಲ್ ಪಂದ್ಯ ನಡೆಯಲಿದ್ದು, . ಈ ವೇಳೆ ಡಾ| ಎ. ಸದಾನಂದ ಶೆಟ್ಟಿ ಅವರನ್ನು ಸಮ್ಮಾನಿಸಲಾಗುವುದು. ಪ0ದ್ಯಾಟದಲ್ಲಿ ಜನರ ಮಾಲಕತ್ವದ

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಯ 8 ತಂಡಗಳು ಇವೆ. ಈಗಾಗಲೇ ತಂಡದ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಪ್ರೊ ಕಬಡ್ಡಿ ಆಟಗಾರರಾದ ಮನೋಜ್ ಗೌಡ, ರಕ್ಷಿತ್ ಪೂಜಾರಿ, ಆದರ್ ಕಾಸರಗೋಡು ಪಾಲ್ಗೊಳ್ಳುತ್ತಿ ದ್ದಾರೆ. ಎಲ್ಲ ಮಾಲಕರೂ ತಮ್ಮ ತಂಡಕ್ಕೆ 10ರಿಂದ 12 ಆಟಗಾರರನ್ನು ಕೊಂಡುಕೊAಡಿದ್ದಾರೆ.

ವಿ.ಆರ್.ಯುನೈಟೆಡ್ ಸಂಸ್ಥೆ ಅಧ್ಯಕ್ಷ ಅಝರ್ ರಝಾಕ್, ಉಪಾಧ್ಯಕ್ಷ ಹರೀಶ್ ನಾಯಕ್, ಕಾರ್ಯದರ್ಶಿ ಮನೋಜ್ ಕುಮಾರ್, ಕರುಣಾಕರ ಎಂ.ಎಸ್., ಪ್ರವೀಣ್ ಕೊಡಿಯಾಲ ಬೈಲ್ ಪತ್ರಿಕಾಗೋಷ್ಠಿಯಲ್ಲಿದ್ದರು.