Recent Posts

Sunday, January 19, 2025
ಸುದ್ದಿ

ಜೈನ್ ಮಿಲನ್ ಕೆರ್ವಾಶೆ ವತಿಯಿಂದ “ಕೆಸರ್ಡೊಂಜಿ ದಿನ” – ಕಹಳೆ ನ್ಯೂಸ್

ಜೈನ್ ಮಿಲನ್ ಕೆರ್ವಾಶೆ ವತಿಯಿಂದ ನಡೆದ ಕೆಸರ್ಡೊಂಜಿ ದಿನ ಭಾನುವಾರ ಕೆರ್ವಾಶೆಯ ಹೊಸಬೆಟ್ಟು ಗದ್ದೆಯಲ್ಲಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹೊಸಬೆಟ್ಟು ಮನೆಯ ಹಿರಿಯರಾದ ವೀರಾಂಗನೆ ಸುಲೋಚನಮ್ಮ ಇವರು ನಡೆಸಿಕೊಟ್ಟರು. ಭಾರತೀಯ ಜೈನ್ ಮಿಲನ್ ವಲಯ ಎಂಟು ಮಂಗಳೂರು ವಿಭಾಗದ ನಿರ್ದೇಶಕರಾದ ವೀರ ಶ್ರೀ ವರ್ಮ ಅಜ್ರಿ ಎಂ ಇವರು ಕಾರ್ಯಕ್ರಮದ ಬಗ್ಗೆ ಶುಭನುಡಿಗಳನ್ನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಜೈನ್ ಮಿಲನ್ ವಲಯ 8 ಮಂಗಳೂರು ಮಂಗಳೂರು ವಿಭಾಗದ ಜೊತೆ ಕಾರ್ಯದರ್ಶಿ, ವೀರಂಗನ ಶಶಿಕಲಾ ಹೆಗ್ಡೆ ಇವರು ಕಾರ್ಯಕ್ರಮದ ಬಗ್ಗೆ ಮಾತನಾಡಿ ಇನ್ನು ಮುಂದೆ ಕೂಡ ಇಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬನ್ನಿ ಎಂದು ನಮಗೆ ಪ್ರೋತ್ಸಾಹಿಸಿದರು. ನಮ್ಮ ಪುರೋಹಿತರಾದ ಅಜಿತ್ ಕುಮಾರ್ ಇಂದ್ರ ಇವರು ಕಾರ್ಯಕ್ರಮದ ಬಗ್ಗೆ ಮಾತನಾಡಿ ಇಂತಹ ಕಾರ್ಯಕ್ರಮಗಳ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಾದ ಜಿನಭಜನೆ, ಧರ್ಮಪಾಠ,ದಿನನಿತ್ಯ ಬಸದಿ ದರ್ಶನ ಮಾಡುವುದು ಮುಂತಾದ ಧಾರ್ಮಿಕ ಆಚಾರ ವಿಚಾರಗಳನ್ನು ಎಲ್ಲಾ ಶ್ರಾವಕ ಶ್ರಾವಕಿಯರು ಒಗ್ಗೂಡಿಸಿಕೊಳ್ಳಬೇಕೆಂದು ಹೇಳಿದರು.ಹಾಗೆಯೇ ವೇದಿಕೆಯಲ್ಲಿ ಕೆರ್ವಾಶೆ ಜೈನ್ ಮಿಲನ್ ಉಪಾಧ್ಯಕ್ಷರಾದ ವೀರ್ ಜಯ ಕುಮಾರ್ ಜೈನ್ ಉಪಸ್ಥಿತರಿದ್ದರು. ಮತ್ತು ವೀರ್ ಪದ್ಮರಾಜ್ ಹೆಗ್ಡೆ ವೀರ್ ದೇವರಾಜ್ ಜೈನ್ ವೀರ್ ವಿನೋದ್ ಕುಮಾರ್ ಜೈನ್ ವೀರಾಂಗನ ಸುಪ್ರಿಯಾ ಜೈನ್ ವೀರಾಂಗನ ವಾಣಿಶ್ರೀ ಜೈನ್ ವೀರ್ ಮೃತ್ಯುಂಜಯ ಜೈನ್ ವೀರ್ ವಿಜಯ್ ಜೈನ್ ವೀರ್ ಧರಣೇಂದ್ರ ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶ್ರೀಯುತ ವೀರ್ ಅರುಣ್ ಕುಮಾರ್ ಜೈನ್ ಹಾಗೂ ವೀರ್ ಅಜಿತ್ ಕುಮಾರ್ ಇಂದ್ರ, ಹಾಗೆ ವೀರ್ ಸುಚಿತ್ ಜೈನ್ ವೀರ್, ಅಭಯ್ ಕುಮಾರ್ ಜೈನ್, ವೀರ್ ಧರ್ಮಸಮರಾಜ್ಯ, ವೀರ್ ಪ್ರಭಾಕರ್ ಜೈನ್,ವೀರಾಂಗನ ರಮ್ಯ ಜೈನ್, ವೀರ್ ರತನ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೆಸರ್ಡೊಂಜಿ ದಿನ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧಿಗಳಲ್ಲಿ ಪಾಲ್ಗೊಂಡು ಜಯಶೀಲರಾದ ಎಲ್ಲಾ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.