Recent Posts

Sunday, January 19, 2025
ಸುದ್ದಿ

ನೆಲ್ಯಾಡಿ: ಪ್ಲಂಬಿಂಗ್ ಹಾರ್ಡವೇರ್ ಮಳಿಗೆಯಲ್ಲಿ ಕಳ್ಳರ ಕೈಚಳಕ : 2 ಲಕ್ಷ ನಗದು, 15 ಲಕ್ಷದ ವಸ್ತುಗಳೊಂದಿಗೆ ಪರಾರಿ – ಕಹಳೆ ನ್ಯೂಸ್

ನೆಲ್ಯಾಡಿ: ಕೆ.ಜೆ.ಕೆ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಜಗದಾಂಬಾ ಏಜೆನ್ಸಿಸ್ ಎಲೆಕ್ಟ್ರಿಕಲ್ ಅಂಡ್ ಪ್ಲಂಬಿಂಗ್ ಹಾರ್ಡವೇರ್ ಮಳಿಗೆಗೆ ಅ.17ರ ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ.

ಮನೋಹರ್ ಸಿಂಗ್ ಎಂಬವರ ಮಾಲಕತ್ವದ ಈ ಅಂಗಡಿಯಾಗಿದ್ದು, ಸುಮಾರು 2 ಲಕ್ಷ ಮೌಲ್ಯದ ಹಣ ಹಾಗೂ ಅಂದಾಜು 15 ಲಕ್ಷದ ವಸ್ತುಗಳು ಕಳವಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಂಗಡಿಯಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾದ ಡಿವಿಯರ್ ಬಾಕ್ಸ್ ಅನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರುಕ್ಮಯ ನಾಯ್ಕ್, ನೆಲ್ಯಾಡಿ ಹೊರಠಾಣೆಯ ಕುಶಾಲಪ್ಪ ನಾಯ್ಕ್, ಪ್ರತಾಪ್, ನವೀನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಂಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು