Recent Posts

Sunday, January 19, 2025
ಬಂಟ್ವಾಳಸುದ್ದಿ

ಬಿಸಿರೋಡಿನ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ 26.18 ಕೋಟಿ ರೂ. ಅನುದಾನ ಬಿಡುಗಡೆ : ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕ ರಾಜೇಶ್ ನಾಯ್ಕ್ ಅವರಿಂದ ರೈಲ್ವೆ ನಿಲ್ದಾಣದ ಪರಿಶೀಲನೆ – ಕಹಳೆ ನ್ಯೂಸ್

ಬಂಟ್ವಾಳ: 26.18 ಕೋಟಿ ರೂ ಅನುದಾನದ ಮೂಲಕ ಸುಸಜ್ಜಿತವಾದ ರೈಲ್ವೆ ನಿಲ್ದಾಣವಾಗಿ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅನುದಾನ ಬಿಡುಗಡೆಯಾಗಿದ್ದು, ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಮಂಗಳೂರು ಸಂಸದ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ತಿಳಿಸಿದರು.

ಅವರು ಬಿಸಿರೋಡಿನ ರೈಲ್ವೆ ನಿಲ್ದಾಣಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಈ ವಿಚಾರವನ್ನು ತಿಳಿಸಿದರು. ನಮ್ಮ ಬೇಡಿಕೆಯಂತೆ ಜಿಲ್ಲೆಯ ಮೂರು ರೈಲ್ವೆ ನಿಲ್ದಾಗಳನ್ನು ಅಭಿವೃದ್ಧಿ ಪಡಿಸಲು ಅನುದಾನ ಮಂಜೂರು ಮಾಡಿದ್ದಾರೆ. ಇದರಲ್ಲಿ ಈಗಾಗಲೇ ಮಂಗಳೂರಿನ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಶಿಲ್ಯಾನ್ಯಾಸ ಕಾರ್ಯಕ್ರಮ ಮಾಡಲಾಗಿದೆ.ಬಂಟ್ವಾಳದ ಈ ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ 26.18 ಕೋಟಿ ರೂ ಅನುದಾನವನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ.ಇದರ ಮಾಸ್ಟರ್ ಪ್ಲಾನ್ ಕೂಡ ತಯಾರಿಸಿದೆ. ಸಂಪೂರ್ಣವಾಗಿ ಹೊಸ ಪರಿವರ್ತನೆಗೊಂಡು, ಮೂಲಭೂತ ಸೌಕರ್ಯಗಳಿಗೆ ಶುಚಿತ್ವ ಆದ್ಯತೆ ಕೊಟ್ಟು ಜನರ ಇಚ್ಛೆಯಂತೆ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಹಣ ಬಿಡುಗಡೆ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಗೆ ವಂದೆ ಭಾರತ್ ರೈಲ್ವೆ ಯ ಬೇಡಿಕೆ ಇದ್ದು, ಪುತ್ತೂರುವರೆಗೆ ಇರುವ ರೈಲನ್ನು ಸುಬ್ರಹ್ಮಣ್ಯ ವರೆಗೆ ವಿಸ್ತರಣೆ ಮಾಡಬೇಕು ಎಂದು ರೈಲ್ವೆ ಸಚಿವರಿಗೆ ಮನವಿ ಮಾಡಿದ್ದೇನೆ.ರೈಲ್ವೆ ಸಂಬಂಧಿಸಿದಂತೆ ಸಂಪೂರ್ಣ ಅಭಿವೃದ್ಧಿ ಗೆ ಸರಕಾರ ಬದ್ದವಾಗಿದೆ.


ರಾಜೇಶ್ ನಾಯ್ಕ್ ಶಾಸಕರಾದ ಬಳಿಕ ಬಂಟ್ವಾಳದ ಸಮಸ್ಯೆಗಳಿಗೆ ಕೇಂದ್ರದಿಂದ ಆಗಬೇಕಾದ ಪರಿಹಾರಗಳನ್ನು ಮಾಡಿಕೊಡುವಂತೆ ಮನವಿ ಮಾಡಿದ್ದರು.ಅದರಂತೆ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಆದ್ಯತೆಯ ಮೇಲೆ ಕೇಂದ್ರದ ಮೂಲಕ ಅನುದಾನವನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುಸಜ್ಜಿತ ರೈಲ್ವೆ ನಿಲ್ದಾಣ: ಅಧಿಕಾರಿ ಸ್ಪಷ್ಟನೆ

ಮಳೆಗಾಲದಲ್ಲಿ ಮಳೆ ನೀರು ಬೀಳದಂತೆ ಮೇಲ್ಚಾವಣಿ ನಿರ್ಮಾಣ, ಎರಡು ಸುಸಜ್ಜಿತ ಪ್ಲಾಟ್ ಫಾರಂ ನಿರ್ಮಾಣ , ಸುಸಜ್ಜಿತ ಕಟ್ಟಡ ನಿರ್ಮಾಣ, ಸಕ್ರ್ಯೂಲೇಟ್ ಏರಿಯಾ , ಪಾಕಿರ್ಂಗ್, ಪಾರ್ಕ್, ರಸ್ತೆ, ಶೌಚಾಲಯ, ಕ್ಯಾಂಟೀನ್ ಸಹಿತ ರೈಲ್ವೆ ಇಲಾಖೆಯ ಸಂಪೂರ್ಣ ವಾದ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಕಟ್ಟಡದ ಮುಂಭಾಗದಲ್ಲಿ ಗ್ರಾನೈಟ್ ಹಾಕಿ ಸ್ಚಚ್ಚ ಮಾಡಲಾಗುತ್ತದೆ ಎಂದು ಅವರು ಹೇಳಿದರು.