Friday, January 24, 2025
ಕ್ರೈಮ್ಸುದ್ದಿ

ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದ ಪತ್ನಿ –ಕಹಳೆ ನ್ಯೂಸ್

ಚಿಕ್ಕಮಗಳೂರು: ತಮ್ಮ ಪ್ರೀತಿಗೆ ಅಡ್ಡ ಅಂತಾ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿರುವ ಘಟನೆ ಕಡೂರು ತಾಲೂಕಿನ ಹನುಮನಹಳ್ಳಿಯಲ್ಲಿ ನಡೆದಿದೆ.

ನವೀನ್ (28) ಮೃತ ಪತಿ. ಪತ್ನಿ ಪಾವನ ಮತ್ತು ಆಕೆಯ ಪ್ರಿಯತಮ ಸಂಜಯ್ ಕೊಲೆ ಆರೋಪಿಗಳಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದವರಾಗಿದ್ದು, ಅತ್ತೆಯ ಮಗಳಾದ ಪಾವನನೊಂದಿಗೆ ೬ ವರ್ಷಗಳ ಹಿಂದೆ ವಿವಾಹವಾಗಿತ್ತು. ದಂಪತಿಗೆ ಮೂರು ವರ್ಷದ ಮಗು ಕೂಡ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲ್ಯದ ಗೆಳೆಯನೊಂದಿಗೆ ಪ್ರೀತಿ.. ಪಾವನ ಬಾಲ್ಯದ ಸ್ನೇಹಿತನಾದ ಸಂಜಯ್‌ನನ್ನು ಪ್ರೀತಿಸುತ್ತಿದ್ದಳು. ತಮ್ಮ ಪ್ರೀತಿಗೆ ಪತಿ ಅಡ್ಡವಾಗುತ್ತಿದ್ದಾನೆ ಎಂದು ಕೊಲೆ ಮಾಡಲು ನಿರ್ಧರಿಸಿದ ಪಾವನ ಆಹಾರದಲ್ಲಿ ನಿದ್ರೆ ಮಾತ್ರೆ ಸೇರಿಸಿ ಹತ್ಯೆಗೈದಿದ್ದಾಳೆ. ಕೊಲೆಯನ್ನು ಸಹಜ ಸಾವು ಎಂದು ಬಿಂಬಿಸಲು ಕಥೆಯನ್ನು ಸೃಷ್ಟಿಸಿದ್ದಳು ಕಿಲಾಡಿ ಪತ್ನಿ ಪಾವನ. ಮೃತನ ತಂದೆಯ ಅನುಮಾನದಿಂದ ಸತ್ಯ ಬಯಲಿಗೆ ಬಂದಿದೆ. ಇದಕ್ಕೂ ಮುನ್ನ ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಲು ಸಂಚು ರೂಪಿಸಿದ್ದಳು ಎಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಬಗ್ಗೆ ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದ್ದು, ತಮ್ಮ ಪ್ರೀತಿಗೆ ಅಡ್ಡವಾಗುತ್ತಿದ್ದ ಕಾರಣ ಪತಿಯನ್ನ ಕೊಲೆ ಮಾಡಲು ಸಂಚು ರೂಪಿಸಿದ್ದ ಪಾವನ, ಚಪಾತಿಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಗಂಡನಿಗೆ ಉಣಬಡಿಸಿದ್ದಾಳೆ. ತಿಂದ ಪತಿರಾಯ ಪ್ರಜ್ಞೆ ತಪ್ಪಿದ್ದಾನೆ. ಬಳಿಕ ಪ್ರಿಯಕರ ಸಂಜಯ್‌ನೊoದಿಗೆ ಸೇರಿ ಪ್ರಜ್ಞೆ ತಪ್ಪಿದ ಪತಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹಳ್ಳಿಯಿಂದ ೩ ಕಿ.ಮೀ. ದೂರದಲ್ಲಿರುವ ಕೆರೆಗೆ ಎಸೆದು ಬಂದಿದ್ದಾರೆ. ಮಾರನೇ ದಿನ ತನ್ನ ಗಂಡ ಮೀನು ಹಿಡಿಯಲು ಕೆರೆಗೆ ಹೋಗಿದ್ದು, ಇನ್ನೂ ಬಂದಿಲ್ಲ ಎಂದು ಪತ್ನಿಯೇ ಊರಿನ ಜನರಿಗೆ ತಿಳಿಸಿದ್ದಾಳೆ.

ಊರಿನ ಜನ ಕೆರೆಗೆ ಹೋಗಿ ನೋಡಿದಾಗ ನವೀನನ ಮೃತದೇಹ ಪತ್ತೆಯಾಗಿದೆ. ಬಳಿಕ ಆ.೬ ರಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಇನ್ನು ತಮ್ಮ ಮಗನ ಸಾವಿನ ಬಗ್ಗೆ ತಂದೆ ಕೃಷ್ಣಮೂರ್ತಿ ಶಂಕೆ ವ್ಯಕ್ತಪಡಿಸಿರುತ್ತಾರೆ. ಈ ಹಿನ್ನೆಲೆ ನವೀನ್‌ನ ಪತ್ನಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ನಡೆದಿರುವ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾಳೆ ಎಂದು ವಿವರಿಸಿದ್ದಾರೆ.
ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂಬ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.