Friday, January 24, 2025
ಸುದ್ದಿ

ಮಹಿಳೆ ಕೈಯಲ್ಲಿ ಗನ್ ಹಿಡಿದು ಹೈಡ್ರಾಮ – ಕಾರಿನಿಂದ ಗುದ್ದಿ ಆರೋಪಿ ಸೆರೆ ಹಿಡಿದ ಪೊಲೀಸರು! – ಕಹಳೆ ನ್ಯೂಸ್

ನ್ಯೂಯಾರ್ಕ್: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಮಹಿಳೆಯೊಬ್ಬಳ ಕೈಯಲ್ಲಿ ಗನ್ ಹಿಡಿದು ಹೈಡ್ರಾಮಾ ಸೃಷ್ಟಿಸಿದ ಘಟನೆ ನ್ಯೂಯಾರ್ಕ್ನಲ್ಲಿ ಕಂಡು ಬಂತು. ಇನ್ನು ನಸ್ಸೌ ಕೌಂಟಿ, ಸೂಪರ್ ಪವರ್ ರಾಷ್ಟ್ರ ಅಮೆರಿಕದಲ್ಲಿ ಗನ್ ಸಂಸ್ಕೃತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.ನಿತ್ಯ ಒಂದಿಲ್ಲ ಒಂದು ಕಡೆ ಗುಂಡಿನ ದಾಳಿ ನಡೆಯುತ್ತಿದ್ದು, ಅಮಾಯಕ ನಾಗರಿಕರು ಬಲಿಯಾಗುವುದು ಅಥವಾ ಗಂಭೀರ ರೀತಿಯ ಗಾಯಗೊಳ್ಳುವುದು ಸಾಮಾನ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನ್ಯೂಯಾರ್ಕ್ ಸಮೀಪದ ನಸ್ಸೌ ಕೌಂಟಿಯಲ್ಲಿ ಮಹಿಳೆಯೊಬ್ಬರು ಮಂಗಳವಾರ ಪಾದಚಾರಿ ಮಾರ್ಗದಲ್ಲಿ ಗನ್ ಹಿಡಿದು ಅವಾಂತರ ಸೃಷ್ಟಿಸಿದ್ದರು. ಮಹಿಳೆಯ ಕೈಯಲ್ಲಿ ಗನ್ ಕಂಡ ಸ್ಥಳೀಯರು ಭಯಭೀತಗೊಂಡರು. ಮೊದಲು ಆ ಮಹಿಳೆ ಎದುರಿಗಿದ್ದವರತ್ತ ಗನ್ ಗುರಿಯಿಟ್ಟಿದ್ದರು. ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದ್ದಳು. ನಂತರ ಆಕೆ ತನ್ನ ತಲೆಗೆ ಗನ್ ಇಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದರು. ಅಷ್ಟರಲ್ಲೇ ಪೊಲೀಸರು ಅತ್ಯಂತ ಜಾಣತನದಿಂದ ವರ್ತಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಭಾರಿ ಅನಾಹುತ ತಪ್ಪಿಸಲು ಸಕಾಲದಲ್ಲಿ ಸ್ಪಂದಿಸಿದ ಪೊಲೀಸರಿಗೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಯುತ್ತಿದ್ದಾರೆ.

ನಸ್ಸೌ ಕೌಂಟಿಯ ಉತ್ತರ ಬೆಲ್‌ಮೂರ್‌ನಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ಮಂಗಳವಾರ ಮಧ್ಯಾಹ್ನ 2:20 ಕ್ಕೆ, ಮಹಿಳೆಯೊಬ್ಬರು ಗನ್ ಹಿಡಿದು ರಸ್ತೆಯಲ್ಲಿ ಹೈಡ್ರಾಮಾ ನಡೆಸುತ್ತಿರುವುದರ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಮಾಹಿತಿ ಬಂದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಹಿಳೆಗೆ ಬಂಧನವಾಗುವAತೆ ಎಚ್ಚರಿಸಿದರು. ಅಷ್ಟೇ ಅಲ್ಲ ಮಹಿಳೆಯ ಹೈಡ್ರಾಮಾದಿಂದಾಗಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಕಿಲೋ ಮೀಟರ್‌ಗಳವರೆಗೆ ವಾಹನಗಳು ಸಾಲಿನಲ್ಲಿ ನಿಂತಿದ್ದವು.
ಮಹಿಳೆಗೆ ಪೊಲೀಸರ ಎಚ್ಚರಿಕೆಯ ನಡೆವೆಯೂ ಆಕೆ ಭಾರೀ ವಾಹನಗಳ ದಟ್ಟಣೆ ಮಧ್ಯೆ ಗುಂಡು ಹಾರಿಸಿ ಅವಾಂತರ ಸೃಷ್ಟಿಸಿದ್ದರು. ರಸ್ತೆ ದಾಟುವಾಗ ಎದುರಿಗೆ ಬರುತ್ತಿದ್ದ ಕಾರುಗಳತ್ತ ಗನ್ ತೋರಿಸಿ ಬೆದರಿಕೆ ಹಾಕಿದ್ದರು. ಬಳಿಕ ತನ್ನ ತಲೆಗೆ ಗುರಿ ಇಟ್ಟುಕೊಂಡು ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು.ಮಹಿಳೆಯನ್ನು ತಾಳ್ಮೆಯಿಂದ ಪರೀಕ್ಷಿಸಿ ಪೊಲೀಸರು ಆಕೆಯನ್ನು ತಮ್ಮ ವಾಹನದಿಂದ ಡಿಕ್ಕಿ ಹೊಡೆದಿದ್ದಾರೆ. ಪೊಲೀಸ್ ವಾಹನ ಸ್ವಲ್ಪ ಮಹಿಳೆಗೆ ಟಚ್ ಆಗಿದ್ದರಿಂದ ಆಕೆ ಕೆಳಗೆ ಉರುಳಿ ಬಿದ್ದಿದ್ದಾಳೆ. ಈ ವೇಳೆ ಕೆಲವೇ ಸೆಕೆಂಡುಗಳಲ್ಲಿ ಆಕೆಯನ್ನು ಸುತ್ತುವರೆದ ಪೊಲೀಸರು ಸ್ಥಳದಲ್ಲಿ ಬಿದ್ದ ಬಂದೂಕನ್ನು ವಶಕ್ಕೆ ಪಡೆದುಕೊಂಡರು. ಪೊಲೀಸರ ಚಾಣಾಕ್ಷತನದಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಇನ್ನು ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ವಿಚಿತ್ರ ವರ್ತನೆ ಹಾಗೂ ಕಾರಣಗಳ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಲಾಗುತ್ತಿದೆ. ಸದ್ಯ ಈ ಘಟನೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗ್ತಿದ್ದು, ಪೊಲೀಸರ ಶೌರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.