Friday, January 24, 2025
ಸುದ್ದಿ

ಐದನೇ ಹಾಗೂ ಅಂತಿಮ ಕಕ್ಷೆಯ ಸುತ್ತಾಟವನ್ನು ಪೂರ್ಣಗೊಳಿಸಿದ ಇಸ್ರೋದ ಚಂದ್ರಯಾನ -3 – ಕಹಳೆ ನ್ಯೂಸ್

ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಇಸ್ರೋದ ಚಂದ್ರಯಾನ-3, ಐದನೇ ಹಾಗೂ ಅಂತಿಮ ಕಕ್ಷೆಯ ಸುತ್ತಾಟವನ್ನು ಪೂರ್ಣಗೊಳಿಸಿದ್ದು, ಚಂದ್ರನ ಮತ್ತಷ್ಟು ಸಮೀಪ ಬಂದಿದೆ.

ಚಂದ್ರನ ದಕ್ಷಿಣ ಧ್ರುವದಿಂದ ಜಸ್ಟ್ 163 ಕಿಲೋಮೀಟರ್ ದೂರದಲ್ಲಿ ನೌಕೆ ಸಾಗುತ್ತಿದೆ. ಆಗಸ್ಟ್ 5ರಿಂದ ಹಂತ ಹಂತವಾಗಿ ಕಕ್ಷೆಯಿಂದ ಕಕ್ಷೆಗೆ ನೌಕೆಯನ್ನ ದಾಟಿಸುವಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಜುಲೈ 14ರಂದು ಉಡಾವಣೆಯಾಗಿದ್ದ ಚಂದ್ರಯಾನ-3 ತನ್ನ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ. ಆಗಸ್ಟ್ 5ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ ಚಂದ್ರಯಾನ 3 ಇಂದು ಚಂದ್ರನ 5ನೇ ಹಾಗೂ ಅಂತಿಮ ಕಕ್ಷೆಯನ್ನು ಪ್ರವೇಶಿಸಿದೆ. ನೌಕೆಯ ಪ್ರೊಪಲ್ಟನ್ ಮತ್ತು ಲ್ಯಾಂಡರ್ ಮಾಡ್ಯೂಲ್ ಪ್ರತ್ಯೇಕಗೊಳ್ಳಲು ಕ್ಷಣಗಣನೆ ಆರಂಭವಾಗಿದ್ದು ಇಂದು ಪ್ರತ್ಯೇಕಗೊಳ್ಳಲಿವೆ. ಇದರೊಂದಿಗೆ ಲ್ಯಾಂಡರ್‌ ಆ.23ರಂದು ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಯತ್ನಿಸುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕ್ರಿಯೆಯಲ್ಲಿ ಲ್ಯಾಂಡರ್‌ ಮತ್ತು ರೋವರ್‌ ಡೀಬೂಸ್ಟ್‌ ಮಾಡುವ ಮೂಲಕ ಅದನ್ನು ಚಂದ್ರನಿಂದ 100ಕಿಮೀ. ವೇಗದಲ್ಲಿ ಕೊಂಡೊಯ್ದು, ೩೦ ಕಿ.ಮೀ ಇದ್ದಾಗ ವೇಗವನ್ನು ಹಂತ ಹಂತವಾಗಿ ತಗ್ಗಿಸಿ ಚಂದ್ರನ ನಿಗದಿತ ಸ್ಥಳದಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ ಮಾಡಲಾಗುತ್ತದೆ.