Sunday, January 26, 2025
ಸುದ್ದಿ

ಬರಿಮಾರು ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ಶ್ರಾವಣ ಸಂಕ್ರಮಣ ಪ್ರಯುಕ್ತ ಮನೆಗೊಂದು ಮರ ಕಾರ್ಯಕ್ರಮ – ಕಹಳೆ ನ್ಯೂಸ್

ಶ್ರಾವಣ ಸಂಕ್ರಮಣ ಪ್ರಯುಕ್ತ ಬರಿಮಾರು ಗ್ರಾಮ ದೈವಸ್ಥಾನ ಕಾನಲ್ತಾಯ ಮಹಾಕಾಳಿ ದೈವಸ್ಥಾನ ಕಲ್ಲೇಟ್ಟಿಯಲ್ಲಿ ಮನೆಗೊಂದು ಮರ ಕಾರ್ಯಕ್ರಮದಡಿಯಲ್ಲಿ ಸಸಿ ವಿತರಣೆ ಜರಗಿತು. ಗ್ರಾಮದ ಪ್ರತಿ ಮನೆಯಲ್ಲೂ ಗಿಡ ನೆಡಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಂಕ್ರಮಣ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಗಿಡ ಹಸ್ತಾಂತರ ಮಾಡಲಾಯಿತು. ದೈವಾರಾಧನೆಗೂ ಪ್ರಕೃತಿಗೂ ಅವಿನಾಭಾವ ಸಂಬಂಧವಿದೆ ಎಂಬ ನಮ್ಮ ಹಿರಿಯರು ತೋರಿಸಿಕೊಟ್ಟ ದಾರಿಯಲ್ಲಿ ಪ್ರಕೃತಿ ಉಳಿಸಲು ಎಲ್ಲರೂ ಜೊತೆಯಾಗೋಣ, ಈ ದೈವಸ್ಥಾನದ ಆಡಳಿತ ಸಮಿತಿಯು ಈ ಹಿಂದೆಯೂ ದೈವಸ್ಥಾನದ ವಠಾರದಲ್ಲಿ ಹಲವು ಔಷದೀಯ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಣೆ ಕಾರ್ಯಕ್ರಮ ಆಯೋಜನೆ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಜಿeಡಿಜ ಟ್ರಸ್ಟ್ ಸದಸ್ಯರು ಹಾಗೂ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಜಗದೀಶ್ ಎಸ್ ಪೂಜಾರಿ ಸದಸ್ಯರು ವಿಶ್ವನಾಥ ಪೂಜಾರಿ, ಸತೀಶ್ ಪ್ರಭು ಕನ್ನೊಟ್ಟು ಮನೆತನ, ಬಾಲಕೃಷ್ಣ ಪೂಜಾರಿ, ಕ್ಷೇತ್ರದ ದೈವ ನರ್ತಕರಾದ ದಯಾನಂದ ಸೇರಾ ಹಾಗೂ ಭಕ್ತಾಧಿಗಳು ಹಾಜರಿದ್ದರು.