ಮೊಬೈಲ್ ಬಳಸುವ ಮುನ್ನ ಎಚ್ಚರ..!- ಜೇಬಿನಿಂದ ಬಂದ ಹೊಗೆ.. ಮೊಬೈಲ್ ಹೊರತೆಗೆಯುತ್ತಿದ್ದಂತೆ ಬ್ಲಾಸ್ಟ್.. – ಕಹಳೆ ನ್ಯೂಸ್
ಉತ್ತರಪ್ರದೇಶ: ಜೇಬಿನಲ್ಲಿ ಇರಿಸಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.ಅಲಿಗಢ ಕಂಪನಿಯ ಮೊಬೈಲ್ ಫೋನ್ ಒಂದು ಸ್ಫೋಟಗೊಂಡು 47 ವರ್ಷದ ಉದ್ಯಮಿಯೊಬ್ಬರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಉತ್ತರಪ್ರದೇಶ ರಾಜ್ಯದ ಅಲಿಗಢದಲ್ಲಿ ನಡೆದಿದೆ.
ಪ್ರೇಮ್ ರಾಜ್ ಸಿಂಗ್ ಎಂಬ ಉದ್ಯಮಿ ಉತ್ತಮ ಬ್ರಾಂಡ್ನ ಮೊಬೈಲ್ ಅನ್ನು ಮೂರು ವರ್ಷದ ಹಿಂದೆ ಖರೀದಿಸಿದ್ದರು. ಎಂದಿನAತೆ ತಮ್ಮ ಫೋನ್ ಅನ್ನು ತಮ್ಮ ಜೇಬಿನಲ್ಲಿ ಇರಿಸಿಕೊಂಡಿದ್ದರು. ಅದೇಕೋ ಅವರಿಗೆ ತಮ್ಮ ಜೇಬು ಬಿಸಿಯಾಗಿದೆ ಎಂಬ ಅನುಭವವಾಗಿದೆ. ಜೊತೆಗೆ ಮೊಬೈಲಿಂದ ಹೊಗೆ ಬರಲು ಪ್ರಾರಂಭವಾಗಿದೆ. ತಕ್ಷಣವೇ ಮೊಬೈಲ್ ಅನ್ನು ಬೇಬಿನಿಂದ ಹೊರ ತೆಗೆದಿದ್ದಾರೆ. ಆದರೆ, ಅದಾಗಲೇ ದೊಡ್ಡ ಶಬ್ದದಿಂದ ಮೊಬೈಲ್ ಸ್ಫೋಟ ಗೊಂಡಿದೆ. ಜೊತೆಗೆ ಮೊಬೈಲ್ 2 ಭಾಗಗಳಾಗಿ ಬೇರ್ಪಟ್ಟಿವೆ ಎಂದು ಘಟನೆಯ ನಂತರ ಗಾಯಾಳು ಪ್ರೇಮ್ ರಾಜ್ ಸಿಂಗ್ ಹೇಳಿದ್ದಾರೆ.
ಘಟನೆ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ. ಸ್ಫೋಟದ ಪರಿಣಾಮ ಸಿಂಗ್ ಅವರ ಎಡಗೈ ಹೆಬ್ಬೆರಳು ಮತ್ತು ತೊಡೆಯ ಮೇಲೆ ಸುಟ್ಟ ಗಾಯಗಳಾಗಿದ್ದು. ಅದಕ್ಕೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಗಾಯಾಳು ಪ್ರೇಮ್ ರಾಜ್ ಸಿಂಗ್,” ನಾನು ಹಲವು ವರ್ಷಗಳಿಂದ ಅದೇ ಬ್ರಾಂಡ್ನ ಫೋನ್ ಬಳಸುತ್ತಿದ್ದೇನೆ. ಆದರೆ ಇಂದು ನನ್ನ ಮೊಬೈಲ್ ಜೇಬ್ನಿಂದ ಹೊರ ತೆಗೆಯುವಷ್ಟರಲ್ಲೇ ಬ್ಲಾಸ್ಟ್ ಆಗಿದೆ. ಹಾಗಾಗಿ ಆ ಕಂಪನಿಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ. ಅದೃಷ್ಟವಶಾತ್ ಸಣ್ಣ ಮಟ್ಟಿಗೆ ಗಾಯಗಳಾಗಿ, ಬಚಾವ್ ಆಗಿದ್ದೇನೆ ಎಂದು ನಿಟ್ಟುಸಿರು ಬಿಟ್ಟರು.
ಬ್ಲಾಸ್ಟ್ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು: ಇನ್ನು ಕಂಪನಿ ಕುರಿತು ಮಹುವಾ ಖೇರಾ ಪೊಲೀಸ್ ಠಾಣೆಯಲ್ಲಿ ಪ್ರೇಮ್ರಾಜ್ ಸಿಂಗ್ ದೂರು ದಾಖಲಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ, ತನಿಖೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಎಚ್ಒ ವಿಜಯ್ ಸಿಂಗ್ ತಿಳಿಸಿದ್ದಾರೆ.
ಹೀಗೇಕೆ ಮೊಬೈಲ್ಗಳು ಬ್ಲಾಸ್ಟ್ ಆಗುತ್ತವೆ: ಈ ರೀತಿಯ ಘಟನೆಗಳು ನಡೆಯುತ್ತಿರುವುದು ಮೊದಲನೇಯದೇನೂ ಅಲ್ಲ. ಅನೇಕ ಬಾರಿ ಹಲವು ಕಂಪನಿಗಳ ಮೊಬೈಲ್ಗಳು ಹೆಚ್ಚಿನ ಶಾಖದಿಂದಾಗಿ ಸ್ಫೋಟಗೊಂಡ ಉದಾಹರಣೆಗಳಿವೆ. ಕೆಲವೊಮ್ಮೆ ಮೊಬೈಲ್ ಬಳಕೆದಾರರು ಅತೀ ಹೆಚ್ಚು ಕಾಲ ಮೊಬೈಲ್ ಬಳಿಸಿದ್ದರಿಂದ ಬಿಸಿಯಾಗಿ ಸ್ಫೋಟಗೊಂಡಿರುವ ಉದಾಹರಣೆಗಳೂ ಇವೆ. ಇನ್ನು ಗಂಟೆಗಟ್ಟಲೇ ಚಾರ್ಜ್ನಲ್ಲೇ ಇರಿಸಿದರೆ ಈ ರೀತಿಯ ಸ್ಫೋಟಗಳು ನಡೆಯುವ ಸಂಭವ ಹೆಚ್ಚು ಎನ್ನುತ್ತಾರೆ, ತಂತ್ರಜ್ಞರು. ಹಾಗೇ ನೀವು ಒದ್ದೆ ಕೈಯಲ್ಲಿ ನಿಮ್ಮ ಫೋನ್ನ್ನು ಬಳಸಿದರೆ ಅದರೊಳಗೆ ನೀರು ಹೋಗಿ ಸಾಮನ್ಯವಾಗಿ ಮೊಬೈಲ್ ಬಿಸಿಯಾದಾಗ ನೀರಿನ ಅಂಶ ಸೇರಿಕೊಳ್ಳುವುದರಿಂದಲೂ ಬ್ಲಾಸ್ಟ್ ಆಗುವ ಸಾಧ್ಯತೆಗಳು ಇವೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಕೂಡಾ ಮಥುರಾ ಜಿಲ್ಲೆಯ 13 ವರ್ಷದ ಬಾಲಕನೊಬ್ಬ ಚೈನೀಸ್ ಬ್ರಾಂಡ್ನ ಸ್ಮಾಟ್ಫೋðನ್ನಲ್ಲಿ ಗೇಮ್ ಆಡುತ್ತಿದ್ದಾಗ ಸ್ಫೋಟಗೊಂಡು ಸುಟ್ಟ ಗಾಯಗಳಿಂದ ಬಳಲುವಂತಾಗಿತ್ತು.