ಮಂಗಳೂರು: ಗುರುವಾರದಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುಡುಗು ಸಹಿತ ಬಾರೀ ಮಳೆಯಾಗಿದ್ದು ಜನಜೀವನ ಮತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೆಳಗಿನಿಂದ ಮಧ್ಯಾಹ್ನದವರೆಗೆ ಸುಡು ಬಿಸಿಲಿನಿಂದ ಕೂಡಿದ್ದು ತದ ನಂತರ ಮೋಡ ಕವಿದ ವಾತಾವರಣ ವಿದ್ದು 3 ರ ಹೊತ್ತಿಗೆ ಕತ್ತಲೆಯ ವಾತಾವರಣ ನಿರ್ಮಾಣವಾಗಿದ್ದು ವಾಹನ ಸವಾರರು ಹೆಡ್ಲೈಟ್ ಬಳಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದರು.
ಸಂಜೆ 3;30 ಶುರುವಾದ ಮಳೆ ಗುಡುಗು ಮಿಂಚಿನ ಜೊತೆ ಸಂಜೆ 6.30 ತನಕ ಧಾರಾಕಾರವಾಗಿ ಮಳೆ ಸುರಿದಿತ್ತು. ಹವಾಮಾನ ಇಲಾಖೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಈ ರೀತಿ ಮಳೆಯಾಗುತ್ತಿದೆ ಎಂದರು. ತಾರೀಖು 4 ರಿಂದ ಅಕ್ಟೋಬರ್ 9 ರ ತನಕ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು.
ಭಾರಿ ಗುಡುಗು ಸಿಡಿಲು ಮಳೆಯಿಂದಾಗಿ ಯಾವುದೇ ಪ್ರಾಣ ಹಾನಿ ಮತ್ತು ನಷ್ಟದ ಬಗ್ಗೆ ವರದಿಯಾಗಿಲ್ಲ. ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್ ಒಂಬತ್ತರ ತನಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ ಹಿನ್ನೆಲೆಯಲ್ಲಿ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.