Monday, January 27, 2025
ಸುದ್ದಿ

ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಭದ್ರಾವತಿಯ ನಾಲ್ವರು ಸುರಕ್ಷಿತ -ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ! – ಕಹಳೆ ನ್ಯೂಸ್

ಶಿವಮೊಗ್ಗ :ಕೇದಾರನಾಥನ ದರ್ಶನ ಪಡೆಯಲು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಿಂದ ತೆರಳಿದ್ದ ನಾಲ್ವರು ಭಕ್ತರು ಸುರಕ್ಷಿತವಾಗಿದ್ದಾರೆ, ಸೀತಾಪುರದಲ್ಲಿ ಆಶ್ರಯ ಶಿಬಿರದಲ್ಲಿದ್ದಾರೆ ಎಂದು ತಿಳಿದುಬಂದಿದೆ.ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಆಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಅಯೋಮಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಗುಡ್ಡಗಳು ಕುಸಿದಿವೆ, ರಸ್ತೆ ಸಂಚಾರ ಬಂದ್ ಆಗಿದೆ. ಈ ಬೆನ್ನಲ್ಲೇ ಕೇದಾರನಾಥನ ದರ್ಶನ ಪಡೆಯಲು ಶಿವಮೊಗ್ಗ ಜಿಲ್ಲೆಯಿಂದ ತೆರಳಿದ್ದ ನಾಲ್ವರು ಭಕ್ತರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೇದಾರನಾಥಕ್ಕೆ ತೆರಳಿದ್ದ ಭದ್ರಾವತಿಯ ಹುತ್ತಾ ಕಾಲೋನಿಯ ವೀರಣ್ಣ ದಂಪತಿ ಹಾಗೂ ಅವರ ಸೋದರ ಸಂಬAಧಿ ಸದ್ಯಕ್ಕೆ ಕೇದಾರನಾಥದಿಂದ ಕೇವಲ 22 ಕಿ.ಮೀ ದೂರದ ಸೀತಾಪುರದಲ್ಲಿದ್ದಾರೆ. ವೀರಣ್ಣ (74), ಪತ್ನಿ ಸುಶೀಲಮ್ಮ (63) ಹಾಗೂ ಭರ್ಮಪ್ಪ (70), ಪತ್ನಿ ಮಹಾಲಕ್ಷ್ಮಿ ( 60 ) ಸದ್ಯಕ್ಕೆ ಸೀತಾಪುರದಲ್ಲಿ ಆಶ್ರಯ ಶಿಬಿರದಲ್ಲಿದ್ದಾರೆ.

ಆಗಸ್ಟ್ 2 ರಂದು ಉತ್ತರ ಭಾರತ ಪ್ರವಾಸಕ್ಕೆ ತೆರಳಿದ್ದ ಈ ಕುಟುಂಬಗಳು, ಕಳೆದೆರೆಡು ದಿನಗಳ ಹಿಂದೆ ಕೇದಾರನಾಥನ ದರ್ಶನ ಪಡೆಯಬೇಕಿತ್ತು. ಆದರೆ, ದರ್ಶನ ಸಾಧ್ಯವಾಗದೇ ಶಿಬಿರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಗುಡ್ಡ ಕುಸಿತದಿಂದಾಗಿ ಮುಂದೆಯೂ ಹೋಗಲಾಗದೇ, ವಾಪಸ್ ಬರಲಾಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಹಾಗಾಗಿ, ಕೇದಾರನಾಥನ ದರ್ಶನ ಪಡೆಯದೇ ವಾಪಸ್ ಬರಲು ನಿರ್ಧಾರ ಮಾಡಿದ್ದು, ಸ್ಥಳೀಯ ಆಡಳಿತದ ನಿರ್ಧಾರಕ್ಕೆ ಕಾಯುತ್ತಿದ್ದೇವೆ, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದಂಪತಿಗಳು ಮನವಿ ಮಾಡಿದ್ದಾರೆ.