ಅಂಬಲಪಾಡಿ ರಾಷ್ಟೀಯ ಹೆದ್ದಾರಿಯಲ್ಲಿ ಅಪರಿಚಿತ ಮಹಿಳೆಯನ್ನು ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ – ಕಹಳೆ ನ್ಯೂಸ್
ಉಡುಪಿ : ಅಂಬಲಪಾಡಿ ರಾಷ್ಟೀಯ ಹೆದ್ದಾರಿಯಲ್ಲಿ ರಾತ್ರಿ 11ರ ಸಮಯದಲ್ಲಿ ಅಪರಿಚಿತ ಮನನೊಂದ ಮಹಿಳೆಯೋರ್ವಳು ನಡೆಯುತ್ತಿದ್ದು ವಿಷಯ ತಿಳಿದ ವಿಶು ಶೆಟ್ಟಿ ಅಂಬಲಪಾಡಿ ಮಹಿಳೆಯನ್ನು ರಕ್ಷಿಸಿ ತನ್ನ ವಾಹನದಲ್ಲಿ ಸಖಿ ಸೆಂಟರ್ ಗೆ ದಾಖಲಿಸುವ ಮೂಲಕ ಸಂಭಾವ್ಯ ದುರಂತ ತಪ್ಪಿದೆ.
ಮಹಿಳೆ ಆಶಾ(30ವ) ಕಾರ್ಕಳದ ಅತ್ತೂರಿನವಳೆಂದು ತಿಳಿದು ಬಂದಿದೆ. ಸಂಬAಧಿಕರು ಸಖಿ ಸೆಂಟರ್ ಸಂಪರ್ಕಿಸುವAತೆ ವಿಶು ಶೆಟ್ಟಿ ತಿಳಿಸಿದ್ದಾರೆ.
ಮಹಿಳೆ ಸರಿಯಾದ ಉಡುಪು ಧರಿಸದೇ ಇದ್ದು ಸ್ಥಳೀಯ ಮಹಿಳೆಯೋರ್ವರಿಂದ ಉಡುಪು ತರಿಸಿ ಹಾಕಲಾಯಿತು. ರಕ್ಷಣಾ ಕಾರ್ಯದಲ್ಲಿ ಚಾಲಕ ವೃತ್ತಿಯ ಗುರುಸಿದ್ದಪ್ಪ ಸಹಕರಿಸಿದ್ದಾರೆ. ನಗರ ಠಾಣೆಗೆ ಮಾಹಿತಿ ನೀಡಲಾಗಿದೆ.