‘ಸ್ಪಂದನ. ನಾನೆಂದೂ ನಿನ್ನವ, ಕೇವಲ ನಿನ್ನವ. ಚಿನ್ನ’ : ಇನ್‌ಸ್ಟಾಗ್ರಾಂನಲ್ಲಿ ಭಾವುಕ ಫೋಸ್ಟ್ ಮಾಡಿದ ವಿಜಯ ರಾಘವೇಂದ್ರ – ಕಹಳೆ ನ್ಯೂಸ್
ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಸಾವನ್ನಪ್ಪಿ ಇಂದಿಗೆ 12 ದಿನವಾಗಿದೆ. ಪ್ರೀತಿಯ ಮಡದಿಯನ್ನ ಕಳೆದುಕೊಂಡ ನೋವಿನಲ್ಲೆ ಎಲ್ಲಾ ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಲಾಗಿದ್ದು, ಇದೀಗ ವಿಜಯ್ ರಾಘವೇಂದ್ರ ಇನ್‌ಸ್ಟಾಗ್ರಾಂನಲ್ಲಿ ತನ್ನ ಅರ್ಧಾಂಗಿಯನ್ನು ಕಳೆದುಕೊಂಡ ನೋವಿನ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಸ್ಪಂದನ. ಹೆಸರಿಗೆ ತಕ್ಕ ಜೀವ. ಉಸಿರೆಗೆ ತಕ್ಕ ಭಾವ. ಅಳೆತಗೆ ತಕ್ಕ ನುಡಿ. ಬದುಕಿಗೆ ತಕ್ಕ ನಡೆ. ನಮಗೆಂದೇ ಮಿಡಿದೆ ನಿನ್ನ ಹೃದಯವ. ನಿಲ್ಲದು ನಿನ್ನೊಂದಿಗಿನ ಕಲರವ. ನಾನೆಂದೂ ನಿನ್ನವ, ಕೇವಲ ನಿನ್ನವ. ಚಿನ್ನ’ ಎಂದು ತನ್ನದೇ ಧ್ವನಿಯಲ್ಲಿ ಸ್ಪಂದನರ ಹಾವ, ಭಾವ, ಪ್ರೀತಿಯನ್ನು ನೆನಪಿಸಿಕೊಂಡು ಅದ್ಬುತವಾದ ಸಾಲುಗಳನ್ನ ಪೋಣಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಗಸ್ಟ್ 6 ರಂದು ಬ್ಯಾಂಕಾಕ್‌ನಲ್ಲಿ ಸ್ಪಂದನ ಹೃದಯಾಘಾತಕ್ಕೆ ಬಲಿಯಾದರು. ಸ್ಪಂದನ ಸಾವಿನ ಬಳಿಕ ವಿಜಯ್ ರಾಘವೇಂದ್ರ ಅವರು ಹಂಚಿಕೊಂಡ ಮೊದಲ ಪೋಸ್ಟ್ ಇದಾಗಿದೆ.