Friday, September 20, 2024
ಸುದ್ದಿ

ತೈಲ ಬೆಲೆ ಏರಿಕೆಯಿಂದ ಯಾಂತ್ರೀಕೃತ ಮೀನುಗಾರಿಕೆ ಮೇಲೆ ದೊಡ್ಡ ಹೊಡೆತ – ಕಹಳೆ ನ್ಯೂಸ್

ಮಂಗಳೂರು: ಮೀನುಗಾರಿಕೆಗೆ ಹೆಸರುವಾಸಿಯಾದ ನಗರ ಮಂಗಳೂರು. ಅದ್ರಲ್ಲೂ ಯಾಂತ್ರೀಕೃತ ಮೀನುಗಾರಿಕೆ ಇಲ್ಲಿ ದೊಡ್ಡ ಪ್ರಮಾಣದಲ್ಲಿದೆ. ಮಂಗಳೂರಿನ ಈ ಮೂಲಕಸುಬಿಗೆ ಈಗ ದೊಡ್ಡ ಹೊಡೆತವೊಂದು ಬಿದ್ದಿದೆ. ಇದಕ್ಕೆ ಕಾರಣ ಏನು..? ಇಲ್ಲಿದೆ ಫುಲ್ ಡಿಟೈಲ್ಸ್..

ದೇಶದ ಕರಾವಳಿಯಲ್ಲಿ ಮೀನುಗಾರಿಕೆ ದೊಡ್ಡ ಕಸುಬು. ಅದ್ರಲ್ಲೂ ಯಾಂತ್ರೀಕೃತ ಮೀನುಗಾರಿಕೆಯು ಬಹಳ ದೊಡ್ಡ ಪ್ರಮಾಣದಲ್ಲಿದೆ. ಸಾವಿರಾರು ಜನ್ರಿಗೆ ನೇರವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗ ನೀಡಿದೆ. ಮೀನಿನ ರಫ್ತಿನಿಂದ ಸಾವಿರಾರು ಕೋಟಿ ರೂಪಾಯಿ ವಿದೇಶ ವಿನಿಮಯ ಗಳಿಸುತ್ತಿದೆ. ಇನ್ನು ಯಾಂತ್ರೀಕೃತ ಮೀನುಗಾರಿಕೆ ಮುಖ್ಯವಾಗಿ ಡೀಸೆಲ್, ಸೀಮೆ ಎಣ್ಣೆ ಮೇಲೆ ಅವಲಂಬಿತವಾಗಿದೆ. ಆದ್ರೆ ಇತ್ತೀಚಿಗೆ ಡೀಸೆಲ್ ಬೆಲೆ ಏರಿಕೆ ಮೀನುಗಾರಿಕೆ ಮೇಲೆ ದೊಡ್ಡ ಹೊಡೆತ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೈಲ ಬೆಲೆ ಏರಿಕೆಯಿಂದ ಯಾಂತ್ರೀಕೃತ ಮೀನುಗಾರಿಕೆ ಸಂಪೂರ್ಣ ನಿಂತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ದೇಶದ ಎಲ್ಲಾ ಕರಾವಳಿ ರಾಜ್ಯದ ಮೀನುಗಾರರ ಸಮಸ್ಯೆಯಾಗಿದೆ. ಹೀಗಾಗಿ ಮುಂದೆ ಮೀನುಗಾರಿಕೆ ನಡೆಸುವುದು ಕಷ್ಟಕರ. ಜೊತೆಗೆ ಹೀಗೆ ಡೀಸೆಲ್ ಬೆಲೆ ಹೆಚ್ಚಾದ್ರೆ ಯಾಂತ್ರಿಕೃತ ಮೀನುಗಾರಿಕೆ ಸ್ಥಗಿತಗೊಳ್ಳುವ ಭೀತಿ ವ್ಯಕ್ತವಾಗಿದೆ.

ಜಾಹೀರಾತು

ಯಾಂತ್ರೀಕೃತ ಮೀನುಗಾರಿಕೆಯನ್ನ ಉಳಿಸಲು ಸರ್ಕಾರ ಮನಸ್ಸು ಮಾಡ್ಬೇಕಾಗಿದೆ. ಮೀನುಗಾರಿಕೆ ನಡೆಸುವವರಿಗೆ ತೈಲ ಬೆಲೆ ತೆರಿಗೆಯಲ್ಲಿ ವಿನಾಯಿತಿ ನೀಡ್ಬೇಕಾಗಿದೆ.

-ವರದಿ: ಶರಣ್ ಮಂಗಳೂರು