Recent Posts

Sunday, January 19, 2025
ಬಂಟ್ವಾಳಸುದ್ದಿ

ಜಲ್ಲಿಕ್ರಶರ್ ಯಂತ್ರದ ಲಕ್ಷಾಂತರ ಬೆಲೆಯ ಸೊತ್ತು ಕಳವು : ಆರೋಪಿಗಳ ಎಡೆಮುರಿ ಕಟ್ಟಿದ ಬಂಟ್ವಾಳ ಖಾಕಿ ಪಡೆ –ಕಹಳೆ ನ್ಯೂಸ್

ಬಂಟ್ವಾಳ: ಜಲ್ಲಿ ಕ್ರಶರ್ ವೊಂದರಲ್ಲಿ ಕ್ರಶರ್ ಯಂತ್ರದ ಲಕ್ಷಾಂತರ ಮೌಲ್ಯದ ಸೊತ್ತೊಂದನ್ನು ಕಳವು ಮಾಡಲಾಗಿದ್ದ ಇಬ್ಬರು ಆರೋಪಿಗಳ ಸಹಿತ ಸೊತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಗ್ಗ ನಿವಾಸಿ ಸತೀಶ್ ಮತ್ತು ಬೆಳ್ತಂಗಡಿ ನಿವಾಸಿ ರೋಹಿತ್ ಎಂಬವರನ್ನು ಬಂಧಿಸಿ , ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳವು ಅಗಿದ್ದು ಯಾವಾಗ ಮತ್ತು ಸೊತ್ತುಗಳು ಯಾವುದು ?

ಜಾಹೀರಾತು
ಜಾಹೀರಾತು
ಜಾಹೀರಾತು

ಬಿ.ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ವಿನಯ ಶೆಟ್ಟಿ ಎಂಬವರಿಗೆ ಸೇರಿದ ಕ್ರಶರ್ ನಿಂದ ಕ್ರಶರ್ ಜಾಬ್ ಪ್ಲೇಟ್ ಒಂದು ವಾರಗಳ ಹಿಂದೆ ಕಳವಾಗಿತ್ತು. 450 ಕೆ.ಜಿ.ತೂಕದ ಸುಮಾರು 2,60,000 ಲಕ್ಷ ಮೌಲ್ಯದ ಸೊತ್ತುನ್ನು ಕಳವು ಮಾಡಲಾಗಿದೆ ಎಂದು ನಗರ ಪೋಲಿಸ್ ಠಾಣೆಗೆ ದೂರು ನೀಡಲಾಗಿತ್ತು.

ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಲಕ್ಷಾಂತರ ರೂ ಮೌಲ್ಯದ ಕಳವಾದ ಸೊತ್ತು ಹಾಗೂ ಕಳವಿಗೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡು ,ಆರೋಪಿಗಳನ್ನು ಬಂಧಿಸಿದ್ದಾರೆ. ನಗರ ಠಾಣಾ ಎಸ್. ಐ.ರಾಮಕೃಷ್ಣ, ಅಪರಾಧ ವಿಭಾಗದ ಎಸ್.ಐ.ಕಲೈಮಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.