Recent Posts

Monday, January 20, 2025
ಸುದ್ದಿ

ಕಾಸರಗೋಡು ಆಸ್ಪತ್ರೆಯ ತಾಜ್ಯಗಳನ್ನು ಕರ್ನಾಟಕಕ್ಕೆ ವಿಲೇವಾರಿ ಮಾಡುತ್ತಿದ್ದ ದಂಧೆಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು – ಕಹಳೆ ನ್ಯೂಸ್

ವಿಟ್ಲ: ಕಾಸರಗೋಡಿನಿ ಆಸ್ಪತ್ರೆಗಳ ತ್ಯಾಜ್ಯವನ್ನು ಕರ್ನಾಟಕ ವಾಹನ ಮೂಲಕ ಕರ್ನಾಟಕಕ್ಕೆ ತಂದು ನಿರ್ಜನ ಪ್ರದೇಶದಲ್ಲಿ ಬಿಸಾಡಿ ಹೋಗುತ್ತಿರುವ ದಂಧೆಯನ್ನು ಕಲ್ಲಡ್ಕ ಕಾಂಞAಗಾಡು ಹೆದ್ದಾರಿಯ ಉಕ್ಕುಡದಲ್ಲಿ ಸಾರ್ವಜನಿಕರು ಪತ್ತೆ ಹಚ್ಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಜು.27ರಂದು ಈ ರೀತಿಯಾಗಿ ಕೇಪು ಗ್ರಾಮದ ಕುದ್ದುಪದವಿನ ಖಾಸಗೀ ಜಾಗವೊಂದರಲ್ಲಿ ತೋಡಿಗೆ ತ್ಯಾಜ್ಯ ನೀರು ಬಿಡುತ್ತಿದ್ದ ವೇಳೆ ಕೇಪು ಗ್ರಾಮ ಪಂಚಾಯಿತಿಯವರು ಪತ್ತೆ ಹಚ್ಚಿ ಪೊಲೀಸ್ ವಶಕ್ಕೆ ನೀಡುವ ಕಾರ್ಯ ಮಾಡಿದ್ದರು ಮತ್ತು 50 ಸಾವಿರ ಧಂಡವನ್ನು ವಿಧಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಮತ್ತೆ ಅದೇ ಚಾಲಿಯನ್ನು ಮುಂದುವರಿಸಿದ್ದು ಆಸ್ಪತ್ರೆಯಿಂದ ತ್ಯಾಜ್ಯವನ್ನು ತುಂಬಿ ಕರ್ನಾಟಕ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ವಾಹನವನ್ನು ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ವಾರದಿಂದ ಹಲವು ಬಾರಿ ತ್ಯಾಜ್ಯವನ್ನು ತಂದಿರುವುದಾಗಿ ಚಾಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದ್ದಾರೆ.