Thursday, January 23, 2025
ಸುದ್ದಿ

ಪ್ಯಾಂಟ್ ಬಟನ್ ಅನ್ನು ಚಾಕಲೇಟ್ ಎಂದು ನುಂಗಿದ ಮಗು; ಪ್ರಾಣ ಕಾಪಾಡಿದ ವೈದ್ಯರು- ಕಹಳೆ ನ್ಯೂಸ್

ಕಾರವಾರ:ಪ್ಯಾಂಟ್ ಬಟನ್ ನುಂಗಿದ್ದ ಮಗುವಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಪ್ರಾಣ ಕಾಪಾಡಿದ್ದಾರೆ.ಎರಡು ತಿಂಗಳ ಹಸುಳೆಯ ಗಂಟಲಿನಲ್ಲಿ ಸಿಲುಕಿದ್ದ ಪ್ಯಾಂಟ್ ಬಟನ್ ಅನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದು ಜೀವ ಉಳಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತಃ ಬಿಹಾರದ ಸದ್ಯ ಭಟ್ಕಳದ ರಂಗಿನಕಟ್ಟೆ ಬಳಿ ವಾಸವಿರುವ ಕಮಲ-ಕಿಶೋರ ದಂಪತಿಯ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಹಸುಳೆ. ಮಗುವಿನೊಂದಿಗೆ ಆಟವಾಡುತ್ತಿದ್ದ ಈಕೆಯ 2 ವರ್ಷದ ಮತ್ತೋರ್ವ ಬಾಲಕಿಯು ಮಗುವಿಗೆ ಬಟನ್ ನೀಡಿದ್ದಳು. ಮಗು ಚಾಕಲೇಟ್ ಎಂದು ತಿಳಿದು ಬಾಯಲ್ಲಿ ಇಟ್ಟುಕೊಂಡಿದ್ದು ಕ್ರಮೇಣ ಗಂಟಲಿಗೆ ಜಾರಿದೆ. ತಕ್ಷಣ ಉಸಿರಾಟದ ಸಮಸ್ಯೆಗೊಳಗಾಗಿದೆ. ಗಮನಿಸಿದ ಪಾಲಕರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ. ಸತೀಶ್ ನೇತೃತ್ವದ ವೈದ್ಯರ ತಂಡ, ಕೊಳವೆ ಮೂಲಕ ಯಶಸ್ವಿ ಚಿಕಿತ್ಸೆ ನಡೆಸಿ ಗಂಟಲಿನಲ್ಲಿ ಸಿಲುಕಿದ್ದ ಬಟನ್ ಹೊರಗೆ ತೆಗೆದಿದ್ದಾರೆ. ಇದೀಗ ಮಗು ಆರೋಗ್ಯವಾಗಿದೆ.