Recent Posts

Sunday, January 19, 2025
ಸುದ್ದಿ

ಗುರಿ ತಲುಪಲು ಏಕಾಗ್ರತೆ, ಸತತ ಪರಿಶ್ರಮ ಅಗತ್ಯ: ರೋನಾಲ್ಡ್ ಪಿಂಟೋ – ಕಹಳೆ ನ್ಯೂಸ್

ಪುತ್ತೂರು: ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ನಾವು ನಮ್ಮ ಗುರಿಯನ್ನು ತಲುಪಬೇಕಾದರೆ ಏಕಾಗ್ರತೆ ಹಾಗು ಸತತ ಪರಿಶ್ರಮದ ಅಗತ್ಯವಿದೆ. ದೇಶ ಕಂಡ ಮಹಾನ್ ವ್ಯಕ್ತಿ ಅಬ್ದುಲ್ ಕಲಾಮ್ ನುಡಿಯಂತೆ ದೊಡ್ಡದಾದ ಕನಸನ್ನು ಕಾಣಬೇಕು, ಆ ಕನಸನ್ನು ನನಸಾಗಿಸಲು ಪ್ರತಿ ನಿಮಿಷ ಪ್ರಯತ್ನಿಸಬೇಕು. ಐಫೆಲ್ ಟವರ್‍ಗೆ ಹತ್ತಿ ನಕ್ಷತ್ರ ನೋಡುವಷ್ಟು ಮಹಾ ಯೋಜನೆ ಇರಬೇಕು ಎಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ವ್ಯಕ್ತಿತ್ವ ವಿಕಸನದ ನಿರ್ದೆಶಕ ರೋನಾಲ್ಡ್ ಪಿಂಟೊ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಪ್ಲೇಸ್‍ಮೆಂಟ್ ಸೆಲ್ ಮತ್ತು ವಿಜ್ಷಾನ ಸಂಘದ ಸಹ ಆಯೋಗದಲ್ಲಿ ಉದ್ಯೋಗ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಬುಧವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀವನದ ನಡೆ ಗುರಿಯ ಕಡೆ ಮಾತ್ರ ಕೇಂದ್ರೀಕೃತವಾಗಿಬೇಕು. ಆ ಗುರಿ ತಲುಪುವ ಹಾದಿಯಲ್ಲಿ ಎಷ್ಟೇ ಕಷ್ಟ ಅಡೆ-ತಡೆಗಳು ಎದುರಾದರೂ ಅದನ್ನು ಧೈರ್ಯದಿಂದ ಮುನ್ನಡೆಯಬೇಕು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಯಾವುದೇ ವಿಚಾರಗಳ ಅಧ್ಯಯನಕ್ಕೆ ಉತ್ಸಾಹ ಇರಬೇಕು. ಅದು ಬೆಂಕಿ ಪೊಟ್ಟಣದ ಒಳಗಿನ ಕಡ್ಡಿಯಂತೆ ನಮ್ಮೊಳಗೆ ಅವಿತಿರುತ್ತದೆ. ವಿಷಯ ಅದ್ಯಯನವು ನಮಗೆ ಉತ್ತಮ ಭವಿಷ್ಯದ ದಾರಿಯನ್ನು ತೋರಿಸುತ್ತದೆ ಮತ್ತು ಸಾಧನೆಯ ಹಾದಿಯನ್ನು ಸುಗಮಗೊಳಿಸುತ್ತದೆ ಎಂದರು.

ಪ್ರಾಧ್ಯಾಪಕರುಗಳಾದ ಪ್ರೊ.ಕೃಷ್ಣಕಾರಂತ್ ಪ್ರೊ.ಶಿವಪ್ರಸಾದ್, ಈಶ್ವರ್ ಪ್ರಸಾದ್, ವಿದ್ಯಾರ್ಥಿನಿಯರಾದ ಸ್ವಾತಿ, ಕಾವ್ಯ ನಾಯಕ್ ಉಪಸ್ಥಿತದ್ದರು. ಗಣಕಯಂತ್ರ ವಿಜ್ಷಾನ ವಿಭಾಗದ ಉಪನ್ಯಾಸಕಿ ಜೀವಿತಾ ಪ್ರಸ್ಥಾವಿಸಿದರು ವಿದ್ಯಾರ್ಥಿನಿ ನಿಶೃತಾ ಸ್ವಾಗತಿಸಿ.ವಿದ್ಯಾರ್ಥಿ ಹೇಮಂತ್ ಶೆಟ್ಟಿ ವಂದಿಸಿದರು.