Thursday, January 23, 2025
ಸುದ್ದಿ

ಪೋಷಕರು ಬೈಕ್ ಖರೀದಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯನ್ನೇ ಮಾರಿದ 18 ರ ಹುಡುಗ – ಕಹಳೆ ನ್ಯೂಸ್

ಚೀನಾ : ಪೋಷಕರು ಬೈಕ್ ಖರೀದಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ 18 ವಯಸ್ಸಿನ ಹುಡುಗ ಮನೆಯನ್ನೇ ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.

ಸುಮಾರು 1.15 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾನೆ. ಈತನಿಗೆ ಇನ್ನೂ 18 ವರ್ಷ ವಯಸ್ಸಾಗಿರುವುದರಿಂದ ಕುಟುಂಬದ ಕಾನೂನು ಕ್ರಮವು ಮಾರಾಟವನ್ನು ರದ್ದುಗೊಳಿಸಿದೆ. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಲಯದ ಮುಂದೆ ವಿಷಯ ಮಂಡಿಸಿದ ನಂತರ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೋಷಕರು ಬೈಕ್ ಖರೀದಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಜ್ಜನಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡಲು ಹುಡುಗ ನಿರ್ಧರಿಸಿದ್ದ. ಪೋಷಕರಿಗೆ ತಿಳಿಸದೆ ಆಸ್ತಿ ಏಜೆಂಟರನ್ನು ಸಂಪರ್ಕಿಸಿದ್ದ. ಹುಡುಗ ಮತ್ತು ಇಬ್ಬರು ಆಸ್ತಿ ವಿತರಕರ ನಡುವಿನ ಒಪ್ಪಂದದ ಪೇಪರ್ ಗಳನ್ನು ನ್ಯಾಯಾಲಯವು ಪರಿಶೀಲಿಸಿತು. ಇದು ಒಪ್ಪತಕ್ಕದ್ದಲ್ಲ ಎಂದು ಕೋರ್ಟ್ ಹೇಳಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಹುಡುಗ 59 ಲಕ್ಷಕ್ಕೆ ಮನೆಯನ್ನು ಮಾರಿದ್ದ. ಅದನ್ನು ಖರೀದಿದ್ದ ಏಜೆಂಟ್ ಲಾಭಕ್ಕಾಗಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ಹುಡುಗನ ತಾಯಿ, ಆಸ್ತಿ ಏಜೆಂಟ್‍ನ್ನು ಸಂಪರ್ಕಿಸಿ ಒಪ್ಪಂದವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಏಜೆಂಟ್ ನಿರಾಕರಿಸಿದಾಗ, ಪೋಷಕರು ಕಾನೂನು ಮಾರ್ಗ ಹಿಡಿದರು.

ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್ ಹುಡುಗನ ನಡೆಗೆ ಅಚ್ಚರಿ ವ್ಯಕ್ತಪಡಿಸಿತ್ತು. ಈ ಒಪ್ಪಂದವನ್ನು ನ್ಯಾಯಾಲಯ ರದ್ದುಗೊಳಿಸಿತು. ಅಲ್ಲದೇ ಆಸ್ತಿಯ ಮಾಲೀಕತ್ವವನ್ನು ಹುಡುಗನಿಗೇ ನೀಡಿತು.