ಮಧ್ಯಪ್ರದೇಶ : ಪುರುಷನಾಗಿ ಬದಲಾಗುವ ಆಸೆ ವ್ಯಕ್ತಪಡಿಸಿ, ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಅನುಮತಿ ಕೋರಿದ್ದ ಮಹಿಳಾ ಕಾನ್ಸ್ ಟೇಬಲ್ ಗೆ ಸರಕಾರ ಸಮ್ಮತಿ ನೀಡಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ರಾತ್ಲಮ್ ಜಿಲ್ಲೆಯಲ್ಲಿ ಮಹಿಳಾ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಿಕಾ ಕೋಥಾರಿ ಗೃಹ ಇಲಾಖೆಗೆ ಕಳೆದ ವರ್ಷ ಈ ರೀತಿಯ ಮನವಿ ಸಲ್ಲಿಸಿದ್ದು, ದೀಪಿಕಾ ಸಲ್ಲಿಸಿದ್ದ ಅರ್ಜಿಗೆ ಈಗ ಅನುಮತಿ ಸಿಕ್ಕಿದೆ.
ವೈದ್ಯಕೀಯ ವರದಿಗಳ ಆಧಾರದಲ್ಲಿ ಲಿಂಗ ಪರಿವರ್ತನೆಗೆ ಅವಕಾಶ ನೀಡಲಾಗಿದ್ದು, ಡಾ. ರಾಜೀವ್ ಶರ್ಮಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರಕಾರಿ ನೌಕರರಿಗೆ ಲಿಂಗ ಪರಿವರ್ತನೆ ಅನುಮತಿಸಲು ಯಾವುದೇ ಸ್ಪಷ್ಟ ನಿಯಮಗಳಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಲಿಂಗ ಬದಲಾವಣೆ ಬಳಿಕ ದೀಪಿಕಾ ಅವರಿಗೆ ಮಹಿಳಾ ನೌಕರರಿಗೆ ಸಿಗುವ ಯಾವುದೇ ಸವಲತ್ತು ನೀಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.