Recent Posts

Sunday, January 19, 2025
ಸುದ್ದಿ

ಮೊಬೈಲ್ ನಲ್ಲಿ ಮಾತನಾಡುತ್ತ ಮುಖ್ಯಮಂತ್ರಿಗೆ ಸೆಲ್ಯೂಟ್ ಹೊಡೆದ ಪೊಲೀಸ್ ಅಧಿಕಾರಿಗೆ ದಂಡ – ಕಹಳೆ ನ್ಯೂಸ್

ಉತ್ತರಾಖಂಡ್ : ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೊಟ್ಟ್ದರ್ ಪ್ರದೇಶದ ನೆರೆಹಾನಿ ವೀಕ್ಷಣೆಗೆ ತೆರಳಿದ್ದ ವೇಳೆ ಮೊಬೈಲ್ ನಲ್ಲಿ ಮಾತನಾಡುತ್ತ ಸೆಲ್ಯೂಟ್ ಹೊಡೆದಿದ್ದ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.

ನೆರೆಹಾನಿ ವೀಕ್ಷಿಸಲು ಹೆಲಿಕಾಫ್ಟರ್ ನಲ್ಲಿ ಬಂದಿಳಿದ ಪುಷ್ಕರ್ ಸಿಂಗ್ ಅವರನ್ನು ಸ್ವಾಗತಿಸಲು ನಿಂತಿದ್ದ ಪೊಲೀಸ್ ಅಧಿಕಾರಿ ಶೇಖರ್ ಸೂಯಲ್ ಮೊಬೈಲ್ ನಲ್ಲಿ ಮಾತನಾಡುತ್ತಲೇ ಸೆಲ್ಯೂಟ್ ಹೊಡೆಯುವ ದೃಶ್ಯ ವೈರಲ್ ಆಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಂಡಿದ್ದಾರೆ. ಇದೀಗ ಶೇಖರ್ ಸೂಯಲ್ ಅವರನ್ನು ನರೇಂದ್ರ ನಗರದ ಪೆÇಲೀಸ್ ಟ್ರೈನಿಂಗ್ ಸೆಂಟರ್ ಗೆ ವರ್ಗಾವಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು