Recent Posts

Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಆ.25ರಂದು ರ‍್ಯಾಪರ್ ಚಂದನ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಚಿತ್ರದ ಶೀರ್ಷಿಕೆ ಬಿಡುಗಡೆ – ಕಹಳೆ ನ್ಯೂಸ್

ಗಾಯಕ, ಬಿಗ್ ಬಾಸ್ ಕನ್ನಡ ಸೀಸನ್-5ರ ವಿಜೇತ ಚಂದನ್ ಶೆಟ್ಟಿ ಸದ್ಯ ಗಾಯನದ ಜೊತೆಗೆ ನಟನೆಯಲ್ಲಿ ತೊಡಗಿಸಿಕೊಂಡಿದ್ದು, ಚಂದನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಒಂದೆರಡು ಚಿತ್ರಗಳ ಕೆಲಸ ನಡೆಯುತ್ತಿರುವ ಮಧ್ಯೆ ಅವರು ಇನ್ನೊಂದು ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಶೀರ್ಷಿಕೆ ಆ.25ರ ವರಮಹಾಲಕ್ಷ್ಮೀ ಹಬ್ಬದಂದು ಅನಾವರಣಗೊಳ್ಳಲಿದೆ.

ಈ ಹಿಂದೆ ಶ್ರೀಮುರಳಿ ನಾಯಕನಾಗಿ ಅಭಿನಯಿಸಿದ್ದ ‘ಲೂಸ್ ಗಳು’ ಚಿತ್ರ ನಿರ್ದೇಶಿಸಿದ ಯುವ ನಿರ್ದೇಶಕ ಅರುಣ್ ಅಮುಕ್ತ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಇತ್ತೀಚೆಗೆ ಈ ಚಿತ್ರತಂಡ ಟೈಟಲ್ ಪ್ರೋಮೋ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸದ್ಯ ಈ ಪ್ರೋಮೋಗೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಒಂದೊಳ್ಳೆ ಕಥೆಯನ್ನು ತೆರೆ ಮೇಲೆ ತರಲಿದ್ದೇವೆ ಎಂದು ಅರುಣ್ ಭರವಸೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂದನ್ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯಾ, ಸುನಿಲ್ ಪುರಾಣಿಕ್, ಅರವಿಂದ್ ರಾವ್, ಸಿಂಚನಾ, ಪ್ರಶಾಂತ್ ಸಂಬರ್ಗಿ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು