ಪುತ್ತೂರು ವಿದ್ಯುತ್ ಕೇಂದ್ರದಲ್ಲಿ ಯುಜಿ ಕೇಬಲ್ ಕಾಮಗಾರಿ ಹಿನ್ನಲೆ ಇಂದು ಪವರ್ ಕಟ್ : ಮೆಸ್ಕಾಂ ಸೂಚನೆ – ಕಹಳೆ ನ್ಯೂಸ್
ಪುತ್ತೂರು: ಶಾಂತಿಗೋಡು, ಉಪ್ಪಿನಂಗಡಿ ಎಕ್ಸ್ಪ್ರೆಸ್, ಕಾಂಚನ, ಉಪ್ಪಿನಂಗಡಿ, ರಾಮಕುಂಜ, ಕೆದಿಲ, ಕಬಕ ಮತ್ತು ವಾಟರ್ ಸಪ್ಲೈ ಪೀಡರ್ ನಲ್ಲಿ ಆ. 19ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಲ್ಲಿ ಯುಜಿ ಕೇಬಲ್ ಕಾಮಗಾರಿ ಹಾಗೂ ವಿದ್ಯುತ್ ಮಾರ್ಗ ನಿರ್ವಹಣೆ ಹಿನ್ನೆಲೆಯಲ್ಲಿ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಶಾಂತಿಗೋಡು, ಉಪ್ಪಿನಂಗಡಿ ಎಕ್ಸ್ಪ್ರೆಸ್, ಕಾಂಚನ, ಉಪ್ಪಿನಂಗಡಿ, ರಾಮಕುಂಜ, ಕೆದಿಲ, ಕಬಕ ಮತ್ತು ವಾಟರ್ ಸಪ್ಲೈ ಪೀಡರ್ ನಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.
ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಕೊಯಿಲ, ರಾಮಕುಂಜ, ನೆಕ್ಕಿಲಾಡಿ, ಶಾಂತಿಗೋಡು, ಬಲ್ನಾಡು, ಬನ್ನೂರು, ಕಬಕ, ಪಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಚಿಕ್ಕಮುಡ್ನೂರು, ನರಿಮೊಗರು, ಕೊಡಿಪ್ಪಾಡಿ ಮತ್ತು ಕಸಬಾ ಗ್ರಾಮಗಳ ವಿದ್ಯುತ್ ಬಳಕೆದಾರರು ಗಮನಿಸುವಂತೆ ಪ್ರಕಟಣೆ ತಿಳಿಸಿದೆ.