Monday, November 25, 2024
ಸುದ್ದಿ

ಸರ್ಕಾರಿ ನೌಕರರಿಗೆ ಹಬ್ಬದ ಹಿನ್ನೆಲೆ ಉದ್ಯೋಗಿಗಳಿಗೆ ಮುಂಗಡ ವೇತನ ಮತ್ತು ಪಿಂಚಣಿ ಬಿಡುಗಡೆ – ಕಹಳೆ ನ್ಯೂಸ್

ಸಾಲು ಸಾಲು ಹಬ್ಬಗಳ ಹಿನ್ನೆಲೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರ್ಕಾರಿ ನೌಕರರಿಗೆ ಎರಡು ರಾಜ್ಯ ಸರ್ಕಾರಗಳು ಸಿಹಿಸುದ್ಧಿ ನೀಡಿದೆ. ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರವು ಉದ್ಯೋಗಿಗಳಿಗೆ ಮುಂಗಡ ವೇತನ ಮತ್ತು ಪಿಂಚಣಿ ನೀಡಲು ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಓಣಂ ಮತ್ತು ವಿನಾಯಕ ಚತುರ್ಥಿ ಹಬ್ಬಗಳ ಹಿನ್ನೆಲೆಯಲ್ಲಿ ಈ ಬಾರಿ ವೇತನವನ್ನು ಮೊದಲೇ ಬಿಡುಗಡೆ ಮಾಡಲು ರಾಜ್ಯ ಸರ್ಕಾರಗಳು ನಿರ್ಧರಿಸಿವೆ. ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಎಲ್ಲಾ ಉದ್ಯೋಗಿಗಳ ವೇತನವನ್ನು ಮುಂಗಡವಾಗಿ ಕೇಳಲಾಗಿದೆ. ಜೊತೆಗೆ ಓಣಂ ಹಬ್ಬದ ಸಂದರ್ಭದಲ್ಲಿ 4 ಸಾವಿರ ಮುಂಗಡ ಹಣ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇರಳದ ಉದ್ಯೋಗಿಗಳಿಗೆ ಆ.25ರಂದು ಹಣ ವರ್ಗಾವಣೆಯಾಗಲಿದ್ದು, ಮಹಾರಾಷ್ಟ್ರ ನೌಕರರ ಖಾತೆಗೆ ಸೆ. 27ರಂದು ಹಣ ವರ್ಗಾವಣೆಯಾಗಲಿದೆ. ಕೇರಳದ ಎಲ್ಲಾ ಕೇಂದ್ರ ಪಿಂಚಣಿದಾರರ ಪಿಂಚಣಿಯನ್ನು ಪಿಎಒ ಮೂಲಕ ರವಾನೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಹಬ್ಬದ ಪ್ರಯುಕ್ತ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನೌಕರರಲ್ಲಿ ಸಂತಸ ಉಂಟುಮಾಡಿದೆ.