Recent Posts

Monday, November 25, 2024
ಸುದ್ದಿ

ಛಾಯಾಗ್ರಾಹಕರ ದಿನಾಚರಣೆ : ಹಳೇ ಕಾಲದ ಕ್ಯಾಮರಾಗಳನ್ನ ಒಮ್ಮೆ ನೋಡ್ರಿ..! ಹೀಗೂ ಇತ್ತಾ ಕ್ಯಾಮರಾಗಳು..? – ಕಹಳೆ ನ್ಯೂಸ್

ಒಂದು ಚಿತ್ರ ಸಾವಿರ ಪದಗಳಿಗೆ ಸಮ. ಹೀಗಾಗಿಯೇ ‘ಪದಗಳಲ್ಲಿ ವರ್ಣಿಸಲಸಾಧ್ಯವಾದ ಅದೆಷ್ಟೋ ಮಾತುಗಳನ್ನು ಕೇವಲ ಒಂದು ಚಿತ್ರ ವಿವರಿಸುತ್ತದೆ. ಇಂದು ಛಾಯಾಗ್ರಹಕರ ದಿನಾವಾಗಿದ್ದು ದಾವಣಗೆರೆಯಲ್ಲಿ ಹಳೆ ಕಾಲದ ಕ್ಯಾಮರಗಳು ಜನರ ಕಣ್ಣಿಗೆ ಬಿದ್ದಿದ್ದು, ಜನರಂತು ಈ ಕ್ಯಾಮರ ಶೈಲಿಯನ್ನ ನೋಡಿ ಥ್ರಿಲ್ ಆಗಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

184ನೇ ಛಾಯಾಗ್ರಾಹಕರ ದಿನಾಚರಣೆ ಹಿನ್ನೆಲೆಯಲ್ಲಿ ವಿಶ್ವ ಛಾಯಾಗ್ರಾಹಕರ ದಿನವನ್ನು ದಾವಣಗೆರೆಯ ಫೋಟೊಗ್ರಾಫರ್ಸ್ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ.

1920ರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಹಳೇ ಕ್ಯಾಮೆರಾಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಯುವಜನತೆ ಇಂತಹ ಕ್ಯಾಮರನೂ ಇತ್ತಾ ಎಂದು ಅಚ್ಚರಿಗೊಂಡು ಕ್ಯಾಮರ ಪ್ರದರ್ಶನವನ್ನ ವೀಕ್ಷಿಸಿದ್ದಾರೆ.

ಪ್ರಸ್ತುತ ಮೊಬೈಲ್ ಜಮಾನದಲ್ಲಿ ಸುಲಭವಾಗಿ ಫೋಟೊ ತೆಗೆಯಬಹುದು. ಅದರೆ 1920ರ ಕಾಲದಲ್ಲಿ ಒಂದು ಫೋಟೊ ತೆಗೆಯಲು ಫೋಟೊಗ್ರಾಫರ್ಸ್ ಎಷ್ಟು ಕಷ್ಟಪಡುತ್ತಿದ್ದರು ಎಂಬುದನ್ನು ಈ ಹಳೇ ಕ್ಯಾಮೆರಾಗಳು, ಅದರ ಬಿಡಿಭಾಗಗಳನ್ನು ಪ್ರದರ್ಶನಕ್ಕಿಡುವ ಮೂಲಕ ತೋರಿಸಲಾಯಿತು.

ಫೋಟೋಗ್ರಾಫರ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕ್ಯಾಮೆರಾಗಳ ಪ್ರದರ್ಶನದಲ್ಲಿ ಸುಮಾರು ನೂರಕ್ಕೂ ಹೆಚ್ಚು ತರಹೇವಾರಿ ಕ್ಯಾಮೆರಾಗಳು ಹಾಗು ಅದರ ಬಿಡಿಭಾಗಗಳು ಪ್ರದರ್ಶನಗೊಂಡವು. ವಿ8 ಸೋನೊ ಹ್ಯಾಂಡಿ ಕ್ಯಾಮೆರಾ, ನಿಕಾನ್ ಯುನಿಟಿಕ್, ಎಸ್‌ಎಬಿಎ ಯುನಿಟಿಕ್, ಜೆವಿಸಿ ಜಿ ಎಕ್ಸ್, ನಿಕಾನ್ ಡಿ70, ಕೆನಾನ್ ಇಓಎಸ್ ಕಿಸ್, ಮಿಕಾನ್ ಎಫ್ಜಿ-02, ಯಶೀಕಾಎಮ್ ಡಿ-35, ಯಶೀಕಾ ಎಮ್ ಜಿ-1, ಕೆನಾನ್ 530, ಹ್ಯಾಟ್ ಶಾಟ್ ಕ್ಯಾಮೆರಾ, ಕೆನಾನ್ 135, ಮಿಕ್ಸರ್, ಪ್ಯಾನಾಸೋನಿಕ್ ಮಿಕ್ಸರ್, ಕೆನಾನ್ ಹೆಚ್‌ಇಎಡಿ ವಿಡಿಯೋ ರೆಕಾರ್ಡರ್. 1926ರ ಪ್ಲೇಡ್ ಕ್ಯಾಮೆರಾ, ಫಿಲ್ಡ್ ಕ್ಯಾಮೆರಾ, ಹೀಗೆ ಸಾಕಷ್ಟು ಕ್ಯಾಮೆರಾಗಳು ನೋಡುಗರ ಗಮನ ಸೆಳೆದವು.
ಪ್ರದರ್ಶನದಲ್ಲಿ 120 ವರ್ಷಗಳ ಹಳೇಯ 100ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ತೋರಿಸಲಾಗಿದೆ. ಒಲಪ್ಪಾಸ್, ಜೆನಿಕೊ ನೆಚ್ಚಿನ ಕಂಪನಿಗಳ ಹಳೇ ಕ್ಯಾಮರಾಗಳಾಗಿದ್ದು, ಇಂದಿನ ಜನಕ್ಕೆ ನೋಡಲು ಎಲ್ಲೂ ಸಿಗದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮವನ್ನು ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಿದರು. ಕ್ಯಾಮೆರಾ ಮಾತ್ರವಲ್ಲದೇ ಕ್ಯಾಮೆರಾ ಫ್ಲ್ಯಾಶ್‌ಗಳು, ಕ್ಯಾಮೆರಾ ಟ್ರೈಪ್ಯಾಡ್‌ಗಳು, ವಿಸಿಆರ್‌ಗಳು, ಬ್ಲಾಕ್ ಅಂಡ್ ವೈಟ್ ಫೋಟೊಗಳನ್ನು ಪ್ರಿಂಟ್ ಮಾಡುವ ಸಾಧನ, ಸ್ಟುಡಿಯೋ ಕ್ಯಾಮೆರಾದ ಸಾಧನಗಳು, ಹ್ಯಾಂಡಿ ಕ್ಯಾಮೆರಾಗಳು, ಫಿಲ್ಡ್ ಕ್ಯಾಮೆರಾ ಹೀಗೆ ಜನ ನೋಡದೇ ಇರುವ ವಿವಿಧ ರೀತಿಯ ಕ್ಯಾಮೆರಾ ಸಾಧನಗಳು ಕಂಡುಬoದವು. ಕ್ಯಾಮೆರಾಪ್ರಿಯರು ಕೂಡ ತಮ್ಮ ನೆಚ್ಚಿನ ಕ್ಯಾಮೆರಾಗಳನ್ನು ಕಣ್ತುಂಬಿಕೊoಡರು.