Thursday, January 23, 2025
ಬಂಟ್ವಾಳಸುದ್ದಿ

ಅಂಗಳದಲ್ಲಿ ನಿಲ್ಲಿಸಿದ್ದ ಸ್ಲೆಂಡರ್ ಬೈಕ್ ಹಾಗೂ ದಿನಸಿ ಅಂಗಡಿಯಿಂದ ನಗದು ಕಳವು – ಕಹಳೆ ನ್ಯೂಸ್

ವಿಟ್ಲ: ಮನೆ , ಅಂಗಡಿಗಳನ್ನು ಗುರಿಯಾಗಿಸಿ ಜಿಲ್ಲೆಯ ಅಲ್ಲಲ್ಲಿ ಕಳವು ನಡೆಯುತ್ತಿದ್ದು, ಅಂತಹುದೆ ಎರಡು ಘಟನೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿ ಮನೆ ಅಂಗಳದಲ್ಲಿ ನಿಲ್ಲಿಸಿದ ಮೋಟಾರ್ ಸೈಕಲ್ ಹಾಗೂ ದಿನಸಿ ಅಂಗಡಿಯಿಂದ ನಗದು ದೋಚಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಗಳದಲ್ಲಿ ನಿಲ್ಲಿಸಿದ್ದ ಸ್ಲೆಂಡರ್ ಬೈಕ್ ನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಆ.17 ಬೀಡಿ ಬ್ರಾಂಚ್ ಮತ್ತು ದಿನಸಿ ಅಂಗಡಿ ಯನ್ನು ಬೆಳಿಗ್ಗೆ ತೆರೆದ ಸಂದರ್ಭ ಛಾವಣಿಯ ಹಂಚು ತೆಗೆದು, ಅಂಗಡಿಯಲ್ಲಿದ್ದ 150 ರೂ ಮೌಲ್ಯದ ಬೇಕರಿ ತಿಂಡಿ ಹಾಗೂ 350 ರೂ ನಗದು ಕಳವು ಮಾಡಿರುವುದು ಕಂಡು ಬಂದಿದೆ. ಈ ಕುರಿತು ಸಾಲೆತ್ತೂರು ಬಂಟ್ವಾಳ ನಿವಾಸಿ ರಾಮ ಶೆಟ್ಟಿಗಾರ್ (61) ಠಾಣೆಗೆ ದೂರು ನೀಡಿದ್ದಾರೆ.