ಸವಣೂರು : ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಹಾಗೂ ಸರಸ್ವತಿ ವಿದ್ಯಾ ಮಂದಿರ ಪುರುಷರಕಟ್ಟೆ ನರಿಮೊಗರು ಇವರ ಜಂಟಿ ಆಶ್ರಯದಲ್ಲಿ ಸವಣೂರು ವಲಯ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟವು ದಿನಾಂಕ 18ರಂದು ಸರಸ್ವತಿ ಶಾಲಾ ಕ್ರೀಡಾಂಗಣದಲ್ಲಿ ಜರುಗಿತು. ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ. ಹರಿಣಿ ನಿತ್ಯಾನಂದ ಪಂಜಳ ಇವರು ಪಂದ್ಯಾಟವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ. ದಿವ್ಯ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವನಾಥ ರೈ ಮೇಗಿನಗುತ್ತು, ಆಡಳಿತಾಧಿಕಾರಿ ಶ್ರೀಮತಿ ಶುಭಾ ಅವಿನಾಶ್, ನೋಡಲ್ ಅಧಿಕಾರಿ ಬಾಲಕೃಷ್ಣ ಸವಣೂರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ನವೀನ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದಶಾಲಾ ಆಡಳಿತಾಧಿಕಾರಿ ಶ್ರೀಮತಿ ಶುಭಾ ಅವಿನಾಶ್ ಇವರು ಪಂದ್ಯಾಟದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಶಾಲಾ ಸಂಚಾಲಕರಾದ ಅವಿನಾಶ್ ಕೊಡಂಕಿರಿ, ಶಾಲಾ ಸುರಕ್ಷತಾ ಸಮಿತಿಯ ಸುರೇಶ್ ಭಟ್ ಸೂರ್ಡೇಲು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಹುಮಾನ ವಿಜೇತರ ವಿವರ :
ಬಾಲಕರು ಪ್ರಥಮ : ಪ್ರತಿಭಾ ಪಟ್ಟೆ, ದ್ವಿತೀಯ : ಈಡನ್ ಗ್ಲೋಬಲ್ ಬೆಳಂದೂರು.
ಬಾಲಕಿಯರು : ಪ್ರಥಮ : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಂಡೂರು, ದ್ವಿತೀಯ : ಸರಸ್ವತಿ ವಿದ್ಯಾ ಮಂದಿರ ನರಿಮೊಗರು.