Wednesday, November 27, 2024
ಸುದ್ದಿ

ಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ, ಸ್ಪಷ್ಟನೆ ನೀಡಿದ ಸರ್ಕಾರ – ಕಹಳೆ ನ್ಯೂಸ್

ಪೋಲಿಯೋ ಲಸಿಕೆಯಲ್ಲೇ ಪೋಲಿಯೋ ವೈರಸ್ ಇದೆ ಎಂಬ ಸುದ್ದಿ ರಾಜ್ಯದಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದೆಕ್ಕೆಲ್ಲಾ ಕಾರಣವೆಂದರೆ ಉತ್ತರ ಪ್ರದೇಶದಲ್ಲಿ ಪೋಲಿಯೋ ರೋಗ ನಿವಾರಣೆಗಾಗಿ ಮಕ್ಕಳಿಗೆ ನೀಡಲಾಗುವ ಪೋಲಿಯೋ ಲಸಿಕೆಯಲ್ಲಿ ಟೈಪ್ 2 ಪೋಲಿಯೋ ವೈರಾಣು ಪತ್ತೆಯಾಗಿತ್ತು.

ಜನವರಿ 18 ಮತ್ತು 22 ಪೋಲಿಯೋ ದಿನ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಬಯೋಮೆಡ್ ಕಂಪನಿ ಉತ್ಪಾದಿಸಿರುವ ಲಸಿಕೆಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ನಿರ್ಮೂಲನೆಯಾಗಿರುವ ಪೋಲಿಯೋ ಟೈಪ್ 2 ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪೋಲಿಯೋ ಲಸಿಕೆಯಲ್ಲಿ ವೈರಾಣು ಪತ್ತೆಯಾಗಿದೆ ಎಂದು ಪೋಲಿಯೋ ಲಸಿಕೆ ಹಾಕಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ,

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಸರ್ಕಾರ ಅಭಯ ನೀಡಿದ್ದು ಕರ್ನಾಟಕದಲ್ಲಿ ಅಂತಹ ವೈರಸ್ ಪತ್ತೆಯಾಗಿಲ್ಲ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.