ಸುಳ್ಯ : ಆಸ್ತಿ ಹಕ್ಕು ಖುಲಾಸೆಗೆ ಸಂಬAಧಿಸಿದ ಅರ್ಜಿಗೆ ಲಂಚ ಕೇಳಿದ ವಿಚಾರ ಅರಂತೋಡು ಗ್ರಾಮಕರಣಿಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಅರಂತೋಡು ಗ್ರಾಮ ಲೆಕ್ಕಾಧಿಕಾರಿ ಮಿಯಾಸಾಬ್ ಮುಲ್ಲಾ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.ಅರಂತೋಡುನ ಅಡ್ತಲೆ ಹರಿಪ್ರಸಾದ್ ಅವರು ಹಕ್ಕು ಖುಲಾಸೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಕಡತ ವಿಲೇವಾರಿಗಾಗಿ ಮಿಯಾಸಾಬ್ ಮುಲ್ಲಾ 8000 ಬೇಡಿಕೆ ಇಟ್ಟಿದ್ದರು ಎಂದು ತಿಳಿಸಲಾಗಿದೆ.ಮಿಯಾಸಾಬ್ ಮುಲ್ಲಾ ಶನಿವಾರ ಬೆಳಗ್ಗೆ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಅವರು ಲೋಕಾಯುಕ್ತ ಬಲೆಗೆ ಬಿದ್ದಿರುವುದಾಗಿ ತಿಳಿದು ಬಂದಿದೆ.