Wednesday, January 22, 2025
ಸುದ್ದಿ

ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ರಹಸ್ಯವಾಗಿ ಮದುವೆಯಾದ ವಿವಾಹಿತ ಶಿಕ್ಷಕ – ಕಹಳೆ ನ್ಯೂಸ್

ಬೀದರ್: ವಿವಾಹಿತ ಶಿಕ್ಷಕನೊಬ್ಬನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ರಹಸ್ಯವಾಗಿ ಮದುವೆಯಾದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ವಿಚಾರ ಕೆಲ ತಿಂಗಳುಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಬಹಿರಂಗವಾಗುತ್ತಲೇ ಬೆಳಗಾವಿ ಜಿಲ್ಲೆಯ ನಿವಾಸಿಯಾಗಿರುವ ಶಿಕ್ಷಕ ದಿಲೀಪ ಕುಮಾರ್ ಅಜೂರೆ ವಿರುದ್ದ ಮೇಹಕರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏನೂ ಅರಿಯದ ಹೆಣ್ಣ ಮಗಳ ಬಾಳಿನಲ್ಲಿ ಆಟವಾಡಿದ ಶಿಕ್ಷಕನ ವಿರುದ್ದ ಗ್ರಾಮಸ್ಥರು ಗರಂ ಆಗಿದ್ದು, ಆತನನ್ನು ಅಮಾನತು ಮಾಡುವ ಬದಲು ಸೇವೆಯಿಂದಲೇ ವಜಾ ಮಾಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಬೇಸಿಗೆ ಅಂದರೆ ಮಾರ್ಚ್ ತಿಂಗಳ ಸಮಯದಲ್ಲಿ ವಿದ್ಯಾರ್ಥಿನಿ ಮನೆಯಲ್ಲೇ ಬಾಡಿಗೆ ಉಳಿದುಕೊಂಡಿದ್ದ. ಈ ವೇಳೆ ವಿದ್ಯಾರ್ಥಿನಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಾನೆ. ಮನೆಯವರು ಇಲ್ಲದ ವೇಳೆ ವಿದ್ಯಾರ್ಥಿನಿಯೊಂದಿಗೆ ಸಂಪರ್ಕ ಹೊಂದಿದ್ದು, ಯಾರಿಗೂ ಗೊತ್ತಾಗದ ತಾಳಿಕಟ್ಟಿ ಮನೆಯಲ್ಲೆ ಠಿಕಾಣಿ ಹೂಡಿದ್ದ. ಆದರೆ ಜೂನ್ ತಿಂಗಳ ಆರಂಭದಲ್ಲಿ ಶಾಲೆ ಪುನಾರಂಭವಾಗುತ್ತಲೇ ಶಿಕ್ಷಕನ ಮದುವೆ ಪುರಾಣ ಬಯಲಾಗಿದೆ.