Tuesday, January 21, 2025
ಸುದ್ದಿ

ರಸ್ತೆ ದಾಟಲು ನಿಂತಿದ್ದ ವೇಳೆ ಬಸ್ ಡಿಕ್ಕಿ ; ವೃದ್ಧೆ ಸಾವು – ಕಹಳೆ ನ್ಯೂಸ್

ಮಣಿಪಾಲ : ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವೃದ್ಧೆ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ
ಪರ್ಕಳದ ವಸಂತಿ ನಾಯಕ್ ಮೃತರು. ಅವರು ಪರ್ಕಳ ದಿಂದ ಔಷಧ ತೆಗೆದುಕೊಂಡು ಆತ್ರಾಡಿ-ಮಣಿಪಾಲದಲ್ಲಿ ರಸ್ತೆ ದಾಟಲು ಡಿವೈಡರ್ ಬಳಿ ನಿಂತುಕೊoಡಿದ್ದಾಗ ಆತ್ರಾಡಿ ಕಡೆಯಿಂದ ಮಣಿಪಾಲದ ಕಡೆಗೆ ವೇಗದಿಂದ ಬಂದ ಬಸ್, ವಸಂತಿ ನಾಯಕ್ ಅವರಿಗೆ ಡಿಕ್ಕಿಯಾಗಿದೆ. ಪರಿಣಾಮ ಅವರು ರಸ್ತೆಗೆ ಬಿದ್ದಿದ್ದು, ತಲೆಗೆ ತೀವ್ರ ಗಾಯವಾಗಿತ್ತು. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು