Monday, January 20, 2025
ಸುದ್ದಿ

ಕೇವಲ 17ರ ಹರೆಯದಲ್ಲೇ ಸೇನೆ ಸೇರಿದ್ದಾಳೆ ಈ ದೇಶದ ರಾಜಕುಮಾರಿ..!-ಕಹಳೆ ನ್ಯೂಸ್

ಸ್ಪೇನ್:ದೇಶದ ಸೈನ್ಯಕ್ಕೆ ಸೇರುವುದು ಹೆಮ್ಮೆಯ ಸಂಗತಿ. ಆದರೆ ರಾಜಕುಮಾರಿಯೊಬ್ಬಳು ತನ್ನ ದೇಶದ ಸೇನೆಗೆ ಭರ್ತಿಯಾಗುವುದು ಬಹಳ ಅಪರೂಪ. ಸ್ಪೇನ್‌ನ ರಾಜಕುಮಾರಿ ಲಿಯೊನರ್ ತನ್ನ ದೇಶದ ಮಿಲಿಟರಿ ಪಡೆಯನ್ನು ಸೇರಿಕೊಂಡಿದ್ದಾಳೆ. ಈ ಮೂಲಕ ಪ್ರಪಂಚದಾದ್ಯoತ ರಾಜಕುಮಾರಿ ಚರ್ಚೆಗೆ ಗ್ರಾಸವಾಗಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರಮನೆಯಲ್ಲಿ ಐಷಾರಾಮಿ ಬದುಕು ನಡೆಸುತ್ತಿದ್ದ ರಾಜಕುಮಾರಿ ಲಿಯೊನರ್ ಈಗ ಸೈನ್ಯದ ಬೂಟುಗಳು ಮತ್ತು ಸಮವಸ್ತ್ರವನ್ನು ಧರಿಸ್ತಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷವೆಂದರೆ ಈ ರಾಜಕುಮಾರಿಯ ವಯಸ್ಸು ಕೇವಲ 17 ವರ್ಷ. ಲಿಯೊನರ್ ಮೂರು ವರ್ಷಗಳ ಕಾಲ ಸೇನಾ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ. ರಾಜಕುಮಾರಿ ಲಿಯೊನರ್ ಸ್ಪೇನ್‌ನ ರಾಜ ಫೆಲಿಪೆ ಮತ್ತು ರಾಣಿ ಲೆಟಿಜಿಯಾ ಅವರ ಹಿರಿಯ ಮಗಳು. ಗುರುವಾರವೇ ಅವರ ಕುಟುಂಬದ ಪರವಾಗಿ ರಾಜಕುಮಾರಿಗೆ ರಾಜಮನೆತನದಿಂದ ಬೀಳ್ಕೊಡುಗೆ ನೀಡಲಾಗಿದೆ. ರಾಜಕುಮಾರಿ ಲಿಯೊನರ್ ಮಾರ್ಚ್ನಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು.ಪ್ರಿನ್ಸೆಸ್ ಲಿಯೊನರ್ ಮುಂದಿನ ಮೂರು ವರ್ಷಗಳ ಕಾಲ ಕಠಿಣ ಮಿಲಿಟರಿ ತರಬೇತಿಗೆ ಒಳಗಾಗಲಿದ್ದಾರೆ.

ರಾಜಕುಮಾರಿಯನ್ನು ಅಕಾಡೆಮಿಗೆ ಕಳುಹಿಸುವ ಸಂದರ್ಭದಲ್ಲಿ ರಾಜಮನೆತನದವರು ಭಾವುಕರಾದರು. ಕಿಂಗ್ ಫೆಲಿಪೆ ಸ್ಪ್ಯಾನಿಷ್ ಪಡೆಗಳ ಸರ್ವೋಚ್ಚ ಕಮಾಂಡರ್. ಜರಗೋಜಾ ಮಿಲಿಟರಿ ಅಕಾಡೆಮಿಯಿಂದ ತರಬೇತಿಯನ್ನೂ ಪಡೆದಿದ್ದಾರೆ. 50 ವರ್ಷದ ರಾಣಿ ಲೆಟಿಜಿಯಾ ತಮ್ಮ ಮಗಳನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ.

ಹಲವು ಕಾರಣಗಳಿಂದಾಗಿ ಕಳೆದೊಂದು ದಶಕದಿಂದ ಸ್ಪೇನ್ ರಾಜಮನೆತನ ವಿವಾದಗಳಲ್ಲಿ ಸಿಲುಕಿದೆ. ತನ್ನ ಇಮೇಜ್ ಸುಧಾರಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಸೇನೆ ಸೇರುವ ರಾಜಕುಮಾರಿಯ ನಿರ್ಧಾರ ಅಚ್ಚರಿ ಮೂಡಿಸಿದೆ. ರಾಜಮನೆತನದಲ್ಲಿ ಯಾವುದೇ ಗಂಡು ಮಗು ಜನಿಸದಿದ್ದರೆ ರಾಜಕುಮಾರಿ ಲಿಯೋನರ್ ಕುಟುಂಬದ ಉತ್ತರಾಧಿಕಾರಿಯಾಗಲಿದ್ದಾರೆ..