Recent Posts

Monday, January 20, 2025
ಬಂಟ್ವಾಳಶಿಕ್ಷಣಸುದ್ದಿ

ಮಜಿ ವೀರಕಂಭ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘದ ಉದ್ಘಾಟನೆ – ಕಹಳೆ ನ್ಯೂಸ್

ಬಂಟ್ವಾಳ: ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ತಮ್ಮ ಸೃಜನಶೀಲತೆ ವ್ಯಕ್ತಪಡಿಸುವ ಗುಣ ಎಳವೆಯಲ್ಲೇ ಹೊರಹೊಮ್ಮಿದಾಗ ಕೇವಲ ಶಾಲೆಗಳಲ್ಲಿ ಸಾಹಿತ್ಯದ ಚಟುವಟಿಕೆಗಳು ಮಾತ್ರ ಅಲ್ಲದೇ ವೈಯಕ್ತಿಕವಾಗಿ ಸಾಹಿತ್ಯದಲ್ಲಿ ಪ್ರಗತಿಗೆ ಕಾರಣಗಳಾಗುತ್ತವೆ, ಪ್ರಾಥಮಿಕ ಶಾಲಾ ಹಂತದಲ್ಲಿ ಸಾಹಿತ್ಯ ಸಂಘಗಳು ಉತ್ತಮ ಪ್ರೇರಣೆಯನ್ನು ನೀಡುತ್ತವೆ ಎಂದು ಮಕ್ಕಳ ಕಲಾ ಲೋಕದ ಗೌರವ ಸಲಹೆಗಾರರು ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಯುತ ಭಾಸ್ಕರ ಅಡ್ವಾಳ ರವರು ಮಜಿ ವೀರಕಂಭ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಸಂಘ ಉದ್ಘಾಟಿಸಿ ಮಾತನಾಡಿದರು.

ಬಳಿಕ ಮಾತನಾಡಿದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಯುತ ಕೊರಗಪ್ಪ ನಾಯ್ಕ ಸಿಂಗೇರಿಯವರು ಮಕ್ಕಳು ಸಾಹಿತ್ಯದ ಬಗ್ಗೆ ಆಸಕ್ತಿ ತೋರಿಸಿ ತಮ್ಮ ಅನುಭವ ಅನಿಸಿಕೆಗಳನ್ನು ಪದಗಳ ಮೂಲಕ ವ್ಯಕ್ತಪಡಿಸಿದಾಗ ಬರಹದ ಒಲುಮೆ ಮೂಡಲು ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಶಾಲಾ ನಾಯಕಿ ತೃμÁ ಹಾಗೂ ಉಪನಾಯಕ ಶಿಹಾನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ ಸ್ವಾಗತಿಸಿ ಶಿಕ್ಷಕಿ ಸಂಗೀತ ಶರ್ಮ ಪಿ ಜಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಚುಟುಕು, ಕವನ, ಕಥೆ ರಚನೆ ಮುಂತಾಗಿ ತಮ್ಮ ಭಾವನೆ, ಕಲ್ಪನೆ ಗಳನ್ನು ಪದಗಳ ಮೂಲಕ ಹೇಗೆ ವ್ಯಕ್ತ ಪಡಿಸುವುದೆಂದು ಚಟುವಟಿಕೆಗಳ ಮೂಲಕ ತಿಳಿಸಿದರು.