Monday, January 20, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ವಿಟ್ಲ ಚಂದಳಿಕೆಯ ಶಿಲ್ಪಾ ಫರ್ನಿಚರ್ಸ್ ಮತ್ತು ಹೋಲೋ ಬ್ಲಾಕ್ ಫ್ಯಾಕ್ಟರಿ ಮಾಲಕರ ಮೇಲೆ ಎಫ್.ಐ.ಆರ್.!! – ಕಹಳೆ ನ್ಯೂಸ್

ವಿಟ್ಲ/ ಬಂಟ್ವಾಳ : ಚಂದಳಿಕೆಯ ಶಿಲ್ಪಾ ಫರ್ನಿಚರ್ಸ್ ಮತ್ತು ಹೋಲೋ ಬ್ಲಾಕ್ ಫ್ಯಾಕ್ಟರಿ ಮಾಲಕರ ಮೇಲೆ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ .!!?

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ವಿಟ್ಲ ಕಸಬಾ ಗ್ರಾಮದ ನಿವಾಸಿ ಕೃಷ್ಣಪ್ಪ ಮಡಿವಾಳ (70)ಎಂಬವರ ದೂರಿನಂತೆ ದಿನಾಂಕ: 04.07.2023 ರಂದು ರಾತ್ರಿ ವೇಳೆಯಲ್ಲಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಚಂದಳಿಕೆ ಎಂಬಲ್ಲಿರುವ ಶಿಲ್ಪಾ ಫರ್ನಿಚರ್ಸ್ ಮತ್ತು ಹೋಲೋ ಬ್ಲಾಕ್ ಫ್ಯಾಕ್ಟರಿಯ ಅವರಣ ಗೋಡೆ ಕುಸಿದು ಪಿರ್ಯಾದಿದಾರಾದ ಕೃಷ್ಣಪ್ಪ ಮಡಿವಾಳ ರವರ ಮನೆಯ ಹಿಂಭಾಗಕ್ಕೆ ಬಿದ್ದ ಪರಿಣಾಮ ಮನೆಯ ಹಿಂಬದಿಯ ಗೋಡೆ,ಹಂಚು,ಸಿಮೆಂಟ್ ಶೀಟ್ ಪೀಠೋಪಕರಣಗಳು ಹಾಗೂ ಮನೆಯೊಳಗಿದ್ದ ಇತರ ವಸ್ತುಗಳು ಹಾನಿಗೊಂಡಿದ್ದು ಅದರಿಂದ ಪಿರ್ಯಾದಿದಾರರಿಗೆ ಸುಮಾರು 50,000/- ರೂಪಾಯಿಗಳಷ್ಟು ನಷ್ಟ ಉಂಟಾಗಿದ್ದು ಈ ಬಗ್ಗೆ ಪಿರ್ಯಾದಿದಾರರೂ ಆರೋಪಿಗಳಲ್ಲಿ ವಿಚಾರಿಸಿದಾಗ ಮನೆಯನ್ನು ಸರಿ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದು ದಿನ ಕಳೆದಂತೆ ಮನೆ ರಿಪೇರಿ ಮಾಡಿ ಕೊಡದೇ ಇರುವುದರಿಂದ ದಿನಾಂಕ: 10.07.2023 ರಂದು ಸದರಿ ಫ್ಯಾಕ್ಟರಿ ಬಳಿಯಿದ್ದ ಆರೋಪಿಗಳಾದ ನರೇಂದ್ರ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ರವರಲ್ಲಿ ವಿಚಾರಿಸಿದಾಗ ಆರೋಪಿಗಳಿಬ್ಬರು ಅವ್ಯಾಚವಾಗಿ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 146/2023 ಕಲಂ: 427,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು‌ ಪೋಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು