Recent Posts

Monday, January 20, 2025
ಸುದ್ದಿ

ಶ್ರೀ ರಾಮ್ ಸಮಾಜಸೇವಾ ಸಂಸ್ಥೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ – ಕಹಳೆ ನ್ಯೂಸ್

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಸೆಪ್ಟಂಬರ್ ತಿಂಗಳ 18ನೇ ಯೋಜನೆಯನ್ನು ಮಂಗಲ್ಪಾಡಿ ಬಳಿಯ ಅಗರ್ತಿಮೂಲೆ ನಿವಾಸಿ ದಿ.ಗಿರೀಶ್‍ರವರ ಪತ್ನಿ ಮಂಜುಳಾರಿಗೆ ನೀಡಲಾಯಿತು.

ಮೇಸ್ತ್ರೀ ಕೆಲಸ ಮಾಡುತ್ತಿದ್ದ ಗಿರೀಶ್‍ರವರು 4 ತಿಂಗಳ ಹಿಂದೆ ನಿಧನರಾಗಿದ್ದು, ಇವರ ಮನೆ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮನೆಗೆ ಹಾಕಿದ ಸಿಮೆಂಟ್ ಶೀಟ್‍ಗಳು ಹಾರಿ ಹೋಗಿ ಮನೆಯ ಛಾವಣಿ ಕೂಡ ಕುಸಿದಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಬ್ಬರು ಮಕ್ಕಳ ಜೊತೆ ಇದೀಗ ಸಂಸಾರ ಸಾಗಿಸುವ ಮಂಜುಳರ ಮನೆ ನಿರ್ಮಾಣಕ್ಕೆ ಮಂಜೇಶ್ವರದ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆ ತಮ್ಮ ಸದಸ್ಯರಿಂದಲೇ ಸಂಗ್ರಹಿಸಿದ ಅಕ್ಟೋಬರ್ ತಿಂಗಳ ಯೋಜನೆಯ ಮೊತ್ತವನ್ನು ಮಂಜುಳಾರ ಮನೆಗೆ ತೆರಳಿ, ದೇಶದ ಪ್ಯಾರಾ ಕಮಾಂಡೋ, ವೀರ ಯೋಧ ಶನೀಷ್ ಉಪ್ಪಳರವರ ಮುಖಾಂತರ ಹಸ್ತಾಂತರಿಸಲಾಯಿತು. ಈ ವೇಳೆ ಸಂಸ್ಥೆಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು